ಗದಗ : ಜಿಲ್ಲೆಯಲ್ಲಿ ಭೀಕರ ಕೊಲೆಯೊಂದು ನಡೆದಿದ್ದು. ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಅನ್ನಪೂರ್ಣ ರಾಠೋಡ್ ಎಂಬಾಕೆಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಗಜೇಂದ್ರಗಡದ ನವನಗರದಲ್ಲಿ ಕಳೆದ 25 ವರ್ಷಗಳಿಂದ ವಾಸ ಮಾಡ್ತಾಯಿದ್ದ 54 ವರ್ಷದ ಅನ್ನಪೂರ್ಣ ರಾಠೋಡ ಎಂಬ ಶಿಕ್ಷಕಿಯ ಭೀಕರ ಕೊಲೆಯಾಗಿದ್ದು. ಮೃತರಿಗೆ ಇಬ್ಬರು ಮಕ್ಕಳಿದ್ದು, ಇಬ್ಬರು ಬೆಂಗಳೂರಿನಲ್ಲಿ ಇರ್ತಾರೆ. ಓರ್ವ ಮಗ ಎಂಬಿಬಿಎಸ್ ಎಂಡಿ ಮಾಡ್ತಾಯಿದ್ದರೆ, ಇನ್ನೋರ್ವ ಇಂಜನಿಯರಿಂಗ್ ಮುಗಿಸಿ ಕೆಲಸ ಮಾಡ್ತಾಯಿದ್ದಾನೆ..
ಆದ್ರೆ, ಅನ್ನಪೂರ್ಣ ಮಾತ್ರ ಒಂಟಿಯಾಗಿ ಜೀವನ ನಡೆಸುತ್ತಿದ್ದರು.. ಆದರೆ ಇಂದು ಅವರ ಮಕ್ಕಳು ತಾಯಿಗೆ ಕಾಲ್ ಮಾಡಿದ್ದಾರೆ. ಆದರೆ ಎಷ್ಟು ಸಾರಿ ಫೋನ್ ಮಾಡಿದ್ರು, ಫೋನ್ ರಿಸೀವ್ ಮಾಡಿಲ್ಲಾ. ಹೀಗಾಗಿ ಪಕ್ಕದ ಮನೆಯವರಿಗೆ ಹೇಳಿದ್ದಾರೆ. ಅವರು ಬಂದು ನೋಡಿದ ಮೇಲೆ, ಕೊಲೆಯಾಗಿದೆ ಎನ್ನುವ ವಿಷಯ ಗೊತ್ತಾಗಿದೆ. ಗಜೇಂದ್ರಗಡ ಪೊಲೀಸರಿಗೆ ಮಾಹಿತಿ ನೀಡಿದ್ದು, ಗಜೇಂದ್ರಗಡ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ :
ಅನ್ನಪೂರ್ಣ ಅಡುಗೆ ಮನೆಯಲ್ಲಿ ಕೊಲೆಯಾಗಿದ್ದಾಳೆ..ಅಡುಗೆ ಮನೆಯಲ್ಲಿನ ರೊಟ್ಟಿ ಮಾಡುವ ಮಣೆಯಿಂದ ತಲೆಗೆ ಹೊಡೆದು, ಭೀಕರ ಕೊಲೆ ಮಾಡಿ, ಕೊಲೆಗಾರ ನಾಪತ್ತೆಯಾಗಿದ್ದಾನೆ. ಅನ್ನಪೂರ್ಣ ಸಂಬಂಧಿಕರು ಆಕ್ರಂಧನ ಮುಗಿಲು ಮಟ್ಟಿದೆ, ಶಿಕ್ಷಕಿ ಅನ್ನಪೂರ್ಣ ಬಹಳ ಪ್ರಾಮಾಣಿಕತೆಯಿಂದ ಕೆಲಸ ಮಾಡ್ತಾಯಿದ್ದರು ಅದುವೆ ಅವಳನ್ನ ಬಲಿ ಪಡೆದಿದೆ ಅಂತಾ ಕುಟುಂಬಸ್ಥರು ಗೋಳಾಟುತ್ತಿದ್ದಾರೆ.. ಪೋಲಿಸ್ ತನಿಖೆ ನಡೆಸಿ ಆರೋಪಿಗಳ ಹಿಡಿಯಬೇಕು ನಮಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ
ಸಂಬಂಧಿಕರು ಹೇಳೋ ಪ್ರಕಾರ ಕರ್ತವ್ಯ ಮಾಡುವ ಜಾಗದಲ್ಲಿ ಸಾಕಷ್ಟು ಕಿರುಕುಳ ಇತ್ತು ಅಂತಾರೆ. ಆದರೆ ಪೊಲೀಸರು ಹತ್ತಾರು ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ, ಶಿಕ್ಷಕಿ ಕೊಲೆಯಿಂದ ಇಡೀ ಶಿಕ್ಷಕರ ವಲಯ ಬೆಚ್ವಿಬಿದ್ದಿದೆ. ಶಿಕ್ಷಕಿ ಕೊಲೆಯ ರಹಸ್ಯ ಬಯಲು ಮಾಡಲು ಒತ್ತಾಯ ಮಾಡಲಾಗಿದೆ. ಆದರೆ ಮನೆಯಲ್ಲಿ ಕೊಲೆಯಾಗಿದ್ದು, ಹತ್ತಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಟ್ಟಿನಲ್ಲಿ ಪೊಲೀಸ ತನಿಖೆಯಿಂದ ಶಿಕ್ಷಕಿ ಕೊಲೆಯ ರಹಸ್ಯ ತಿಳಿಯಬೇಕಿದೆ.