Saturday, December 21, 2024

ಶಾಲಾ ಪ್ರವಾಸಕ್ಕೆ ಬಂದಿದ್ದ ವ್ಯಾನ್​​ ಪಲ್ಟಿ : 5 ಜನ ಮಕ್ಕಳಿಗೆ ಗಾಯ !

ಚಿಕ್ಕಮಗಳೂರು : ಶಾಲಾ ಪ್ರವಾಸಕ್ಕೆ ಬಂದಿದ್ದ ವ್ಯಾನ್​ ಪಲ್ಟಿಯಾದ ಪರಿಣಾಮ 5 ಮಕ್ಕಳಿಗೆ ಗಾಐವಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು. ಮುಳ್ಳಯನ ಗಿರಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದ್ದು. ಮೈಸೂರಿನ ಗೋಪಾಲಸ್ವಾಮಿ ಶಾಲೆಯ ಮಕ್ಕಳು ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದರು. ಚಿಕ್ಕಮಗಳೂರಿನಿಂದ ಮುಳ್ಳಯನ ಗಿರಿಗೆ ಹೋಗಲು ಸ್ಥಳೀಯ ಟ್ರ್ಯಾಕ್​ ಗಾಡಿಯನ್ನು ಬಾಡಿಗೆ ಪಡೆದು ಮಕ್ಕಳನ್ನು ಕರೆದುಕೊಂಡು ಹೊರಟ್ಟಿದ್ದರು. ಈ ವೇಳೆ ಕೈಮರ ಚೆಕ್​ಪೋಸ್ಟ್​ ಬಳಿಯಲ್ಲಿ ವ್ಯಾನಿನ ಟೈರ್​ ಬ್ಲಾಸ್ಟ್​ ಆಗಿ ಅಪಘಾತ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ.

ಇದನ್ನೂ ಓದಿ : ಅರವಿಂದ್​ ಕೇಜ್ರೀವಾಲ್​ರನ್ನು ವಿಚಾರಣೆ ನಡೆಸಲು ಅನುಮತಿ ಕೋರಿದ ED !

ಒಟ್ಟಿ 12 ಜನ ಮಕ್ಕಳು ಪ್ರವಾಸಕ್ಕೆ ಬಂದಿದ್ದರು. ಇವರಲ್ಲಿ ಒಟ್ಟು 5 ಜನರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಮುಳ್ಳಯ್ಯನ ಗಿರಿ ಎತ್ತರ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದರೆ ದೊಡ್ಡ ಮಟ್ಟದ ದುರ್ಘಟನೆ ಸಂಭವಿಸುತ್ತಿತ್ತು. ಘಟನೆ ಸಂಬಂಧ ಚಿಕ್ಕಮಗಳೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES