ಮಂಡ್ಯ : ಮದ್ದೂರಿನಲ್ಲಿ ಗಾರ್ಮೆಂಟ್ ಬಸ್ ಅಪಘಾತವಾಗಿದ್ದು. ಬಸ್ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ. ಅಪಘಾತದ ದೃಷ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಅಪಘಾತದಲ್ಲಿ ಸುಮಾರು 25ಕ್ಕೂ ಹೆಚ್ಚು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಕಾರು-ಲಾರಿ ನಡುವೆ ಮುಖಾಮುಖಿ ಡಿಕ್ಕಿ : ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೆ ಸಾ*ವು !
ನೆನ್ನೆ(ಡಿಸೆಂಬರ್.10) ಸಂಜೆ ಮದ್ದೂರಿನ ಸೋಮನಹಳ್ಳಿ ಬಳಿಯ ಹಳೇ ಮೈ- ಬೆಂ ಹೆದ್ದಾರಿಯಲ್ಲಿ ಅಪಘಾತ ನಡೆದಿದ್ದು. ಗಾರ್ಮೆಂಟ್ಸ್ ಕೆಲಸ ಮುಗಿಸಿ ಮಹಿಳೆಯರನ್ನು ಮನೆಗೆ ಕರೆದೊಯ್ಯುವ ವೇಳೆ ಈ ಅಪಘಾತ ಸಂಭವಿಸಿದೆ.
ತಿಮ್ಮದಾಸ್ ಟ್ರಾವೆಲ್ಸ್ಗೆ ಸೇರಿದ್ದ ಖಾಸಗಿ ಮಿನಿ ಬಸ್ ರಸ್ತೆಯ ತಿರುವಿನಲ್ಲಿ ತಿರುವು ಪಡೆಯುತ್ತಿದ್ದ ಲಾರಿಗೆ ಡಿಕ್ಕಿ ಹೊಡದು. ರಸ್ತೆಯ ಡಿವೈಡರ್ಗೆ ಬಡಿದು ಪಕ್ಕದ ಹೆದ್ದಾರಿಗೆ ನುಗ್ಗಿದೆ. ಚಾಲಕನ ಅಜಾಗರೂಕತೆಯಿಂದ 25ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯವಾಗಿದ್ದು. 4ಕ್ಕೂ ಹೆಚ್ಚು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕೂದಲೆಳೆ ಅಂತರದಲ್ಲಿ ಮತ್ತೊಂದು ರಸ್ತೆಯಲ್ಲಿ ಬರುತ್ತಿದ್ದ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಅಪಾಯಾದಿಂದ ಪಾರಾಗಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ಮಾಹಿತಿ ದೊರೆತಿದೆ.