Wednesday, January 22, 2025

ಬಿಜೆಪಿ ಪಕ್ಷದಲ್ಲಿರುವ ಎಲ್ಲರು ದುಶ್ಯಾಸನರೆ : ಪ್ರಿಯಾಂಕ್​ ಖರ್ಗೆ

ಕಲಬುರಗಿ : ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವಹೇಳನಕಾರಿ ಪದ ಪ್ರಯೋಗ ವಿಚಾರವಾಗಿ ಕಲಬುರಗಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ. ಒಂದು ಹೆಣ್ಣು ಮಗಳಿಗೆ ಅನ್ಯಾಯವಾಗಿದೆ ಆದರೆ ಯಾವ ಬಿಜೆಪಿಯವರು ಕೂಡ ಇದರ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿಯಲ್ಲಿರುವ ಎಲ್ಲರು ದುಶ್ಯಾಸನರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿ.ಟಿ ರವಿ ಅವಹೇಳನಕಾರಿ ಪದಬಳಕೆ ಕುರಿತು ಮಾತನಾಡಿದ ಪ್ರಿಯಾಂಕ್​​ ಖರ್ಗೆ ‘ಒಂದು ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ, ಆದರೂ ಕೂಡ ಬಿಜೆಪಿಯವರು ಏನು ಮಾತನಾಡುತ್ತಿಲ್ಲ. ಇದು ಮನುಸ್ಮೃತಿ , RSS ಶಾಖಾ ತರಬೇತಿ ಎಂದು ತೋರಿಸುತ್ತದೆ. ಸುಳ್ಳನ್ನ ಸತ್ಯ ಹೇಗ ಮಾಡಬಹುದು ಅಂತಾ ಅವರಿಂದ ಕಲಿಯಬೇಕು.
ಬಿಜೆಪಿಯವರು ಮನೆಗೆ ದೀಪ ಹಚ್ಚುವ ಕೆಲಸ ಮಾಡಿಲ್ಲ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. FLS ರಿಪೋರ್ಟ್ ಬರಲಿ ನೋಡೊಣ.

ಇದನ್ನೂ ಓದಿ : 43 ವರ್ಷಗಳ ಬಳಿಕ ಕುವೈತ್​ಗೆ ಭೇಟಿ ನೀಡಿದ ಭಾರತದ ಪ್ರಧಾನಿ : ಹೇಗಿದೆ ಗೊತ್ತಾ ಎರಡು ದೇಶಗಳ ಸಂಬಂಧ!

ಸಿ.ಟಿ ರವಿ ವಿಶಯದಲ್ಲಿ ಬಿಜೆಪಿಯವರು ಒಗ್ಗಾಟ್ಟಾಗಿದ್ದರೆ, ಎಲ್ಲರು ಹಾಳು ಬುದ್ದಿಯವರೆ ಅಂತಾ ತೋರಿಸುತ್ತದೆ. ನಡೆದಿರುವ ಘಟನೆಯನ್ನು ಬಿಜೆಪಿಯ ಒಬ್ಬರು ಖಂಡಿಸಿಲ್ಲ. ಇದನ್ನು ನೋಡಿದರೆ ಬಿಜೆಪಿಯವರೆಲ್ಲ ದುಶ್ಯಾಸನರೆ ಅಲ್ವಾ. ಯಡಿಯೂರಪ್ಪ, ಮುನಿರತ್ನ ಸಲುವಾಗಿಯೂ ಕೂಡ ಇವರು ಒಂದಾಗಿದ್ದಾರೆ. ಅವರಿಗೂ ಇಲ್ಲಿಯವರೆಗೆ ಒಂದು ನೋಟಿನ್​ ನೀಡಿಲ್ಲ.

ಪೊಲೀಸ್​ ಬಂಧನದ ಕುರಿತು ಖರ್ಗೆ​ ಮಾತು !

ಒಬ್ಬ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಇದ್ದರೆ ಅಲ್ಲಿ ಉಳಿದ ಬಿಜೆಪಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ  ಏನ್ ಕೆಲಸ. ಕಾನೂನು ಪ್ರಕಾರ ಕ್ರಮ ಕೈಗೊಂಡರೆ ಇವರಿಗೇಕೆ ನೋವು. ದರ್ಶನ್​ ಕೇಸ್​ ನೋಡಿ ಮೊಬೈಲ್ ಅದು ಬಿಟ್ಟಿರೋದಕ್ಕೆ ಬೇಲ್ ಗಾಗಿ ಇನ್ನೂ ಓಡಾಡ್ತಿದ್ದಾರೆ.

ಬಿಜೆಪಿಯವರು ಮಾತನಾಡುತ್ತಿರುವುದನ್ನು ನೋಡಿದರೆ ಇವರು ಇನ್ನು 10 ವರ್ಷವಾದರೂ ಅಧಿಕಾರಕ್ಕೆ ಬರಲ್ಲ. ನಾಲಿಗೆ ಮೇಲೆ ಹಿಡಿತ  ಇದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರು ವಿಕ್ಟಿಮ್​ ಆಗಿದ್ದಾರೆ ಎಂದು ಪ್ರಿಯಾಂಕ್​ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES