Wednesday, January 22, 2025

ತಂದೆಯ ಕಣ್ಮುಂದೆಯೆ ಅಪಘಾತದಲ್ಲಿ ಸಾವನ್ನೊಪ್ಪಿದ ಯುವತಿ !

ಚಿಕ್ಕಬಳ್ಳಾಪುರ : ತಂದೆಯೊಂದಿಗೆ ಬಸ್​ನಿಲ್ದಾಣಕ್ಕೆ ಹೋಗುತ್ತಿದ್ದ ವೈದ್ಯ ವಿದ್ಯಾರ್ಥಿನಿ ಕ್ಯಾಂಟರ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು. ಮೃತ ಯುವತಿಯನ್ನು ಯೋಗಿತಾ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯ ಬರ್ಬರ ಹತ್ಯೆ !

22 ವರ್ಷದ ಮೃತ ಯೋಗಿತಾ ಪಶು ವೈದ್ಯ ವಿದ್ಯಾರ್ಥಿನಿಯಾಗಿದ್ದು. ತನ್ನ ತಂದೆಯೊಂದಿಗೆ ಬೈಕ್​ನಲ್ಲಿ ಬಸ್​​ ಸ್ಟ್ಯಾಂಡ್​ಗೆ ಹೋಗುತ್ತಿದ್ದಳು. ಈ ವೇಳೆ ಚಿಕ್ಕಬಳ್ಳಾಪುರದ ಎಸ್​.ಎಸ್​ ವೃತ್ತದಲ್ಲಿ ಬೈಕ್​ಗೆ ಕ್ಯಾಂಟರ್​ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕ್ಯಾಂಟರ್​ ಡಿಕ್ಕಿಯಾಗುತ್ತಿದ್ದಂತೆ  ಯುವತಿ ಕೆಳಗೆ ಉರುಳಿದ್ದು. ಯುವತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಅದೃಷ್ಟವಶಾತ್​ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಿಕ್ಕಬಳ್ಳಾಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES