ವಿಧಾನ ಪರಿಷತ್ ಸದಸ್ಯ ಸಿ,ಟಿ ರವಿ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ದಾವಣಗೆರೆಯಲ್ಲಿ ಪೊಲೀಸ್ ಬಂಧನದಿಂದ ಮುಕ್ತರಾಗಿದ್ದು. ನ್ಯಾಯಾಲಯದಿಂದ ಬಿಡುಗಡೆ ಆದೇಶ ಪ್ರತಿಯನ್ನು ಪಡೆದ ಪೊಲೀಸರು ಸಿ,ಟಿ ರವಿಯನ್ನು ಬಿಡುಗಡೆಗೊಳಿಸಿದ್ದಾರೆ. ಇದರ ಹಿನ್ನಲೆಯಲ್ಲೆ ಸಾಮಾಜಿಕ ಜಾಲತಾಣ (ಎಕ್ಷ್)ನಲ್ಲಿ ಟ್ವೀಟ್ ಮಾಡುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
ಏನಿದೆ ಸಿ.ಟಿ ರವಿ ಟ್ವಿಟ್ನಲ್ಲಿ !
ಇಂದು ನನ್ನ ಮೇಲೆ ದಾಖಲಾದ ಸುಳ್ಳು ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನನ್ನ ಜೊತೆಗಿದ್ದು ಧೈರ್ಯ ತುಂಬಿದ ನನ್ನ ನೆಚ್ಚಿನ ಕಾರ್ಯಕರ್ತ ಬಂಧುಗಳಿಗೆ, ಜೊತೆಗೆ ನಿಂತ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಮತ್ತು ಬಿಜೆಪಿಯ ಎಲ್ಲಾ ರಾಷ್ಟೀಯ ನಾಯಕರು, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಶಾಸಕರು ವಿಧಾನ ಪರಿಷತ್ತ್ , ವಿಧಾನಸಭೆ ಶಾಸಕರು, ಸಂಸದರು, ಮಾಜಿ ಸಚಿವರು, ಹಿರಿಯ ನಾಯಕರು, ಸ್ನೇಹಿತರು, ಮಾಧ್ಯಮದ ಮಿತ್ರರಿಗೆ ಧನ್ಯವಾದಗಳು.
ಇದನ್ಣೂ ಓದಿ : NIA ಕಾರ್ಯಚರಣೆ : ಪ್ರವೀಣ್ ನೆಟ್ಟಾರು ಹತ್ಯೆಯೆ ಪ್ರಮುಖ ಆರೋಪಿ ದೆಹಲಿಯಲ್ಲಿ ಬಂಧನ
ರಾಜ್ಯಾದ್ಯಂತ ತುಘಲಕ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ನನ್ನ ಕಾರ್ಯಕರ್ತ ಬಂಧುಗಳೆ, ನಿಮ್ಮೆಲ್ಲರ ಬೆಂಬಲ ನನ್ನ ಶಕ್ತಿಯನ್ನು ಮತ್ತಷ್ಟು ಇಮ್ಮುಡಿಗೊಳಿಸಿದೆ, ದುಷ್ಟ ಶಕ್ತಿಗಳ ವಿರುದ್ಧ ಇನ್ನೂ ಹೆಚ್ಚಾಗಿ ಹೋರಾಡಲು ಶಕ್ತಿ ತುಂಬಿದೆ. ಭಾರತೀಯ ಜನತಾ ಪಾರ್ಟಿಯ ನಾವೆಲ್ಲರೂ ಒಂದಾಗಿ ಕರ್ನಾಟಕವನ್ನು “ಗೂಂಡಾ ರಿಪಬ್ಲಿಕ್” ಮಾಡಲು ಅವಕಾಶ ಕೊಡುವುದಿಲ್ಲ.