Wednesday, January 22, 2025

ಹೊಸ ಪ್ರಪಂಚದಲ್ಲಿ ಮತ್ತೆ ತಲೆಗೆ ಹುಳ ಬಿಟ್ಟ ಉಪ್ಪಿ : ಹೇಗಿದೆ ಗೊತ್ತಾ UI ಸಿನಿಮಾ !

ಬೆಂಗಳೂರು : ಸ್ಯಾಂಡಲ್​ವುಡ್​ನ ಬಹಳ ನಿರೀಕ್ಷೆ ಮೂಡಿಸಿರೋ ಸಿನಿಮಾ ಯುಐ ರಿಲೀಸ್​ ಆಗಿದೆ. ಉಪ್ಪಿ ತಮ್ಮದೇ ಪ್ರಪಂಚಕ್ಕೆ ಪ್ರೇಕ್ಷಕರನ್ನ ಕರೆದುಕೊಂಡು ಹೋಗಿದ್ದಾರೆ. ಹಾಗಾದ್ರೇ ಉಪ್ಪಿ ಪ್ರಪಂಚ ಪ್ರೇಕ್ಷಕರಿಗೆ ಇಷ್ಟವಾಯ್ತಾ ? ಆ ಹೊಸ ಪ್ರಪಂಚದ ರಿವ್ಯೂ ಏನು ಅನ್ನೋದನ್ನ ಹೇಳ್ತಿವಿ ಈ ಸ್ಟೋರಿ ನೋಡಿ

ಬರೋಬ್ಬರಿ 10 ವರ್ಷಗಳ ಬಳಿಕ ಉಪ್ಪಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ ಅಂದಾಗಲೇ ಕುತೂಹಲ ಮೂಡಿತ್ತು. ಮೂರು ನಾಮದ ರೀತಿ ಕಾಣುವ ‘UI’ ಟೈಟಲ್‌ನಿಂದಲೇ ಗಿಮಿಕ್ ಶುರು ಮಾಡಿದ್ದರು. ಬಳಿಕ ಟೀಸರ್, ವಾರ್ನರ್, ಟ್ರೋಲ್ ಸಾಂಗ್, ಚೀಪ್ ಸಾಂಗ್ ಅಂತೆಲ್ಲಾ ಸದ್ದು ಮಾಡಿದ್ದರು. ಇದೀಗ ಸಿನಿಮಾ ತೆರೆಗಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಿದೆ.

ಹೇಗಿದೆ ಸಿನಿಮಾ !

ಇದು ಸಿನಿಮಾದೊಳಗಿನ ಸಿನಿಮಾ ಕಥೆ ಎಂದು ಮೊದಲೇ ಹೇಳಿ ಉಪ್ಪಿ ಕಥೆ ಶುರು ಮಾಡುತ್ತಾರೆ. ಕಥೆಯ ನಿರೂಪಣೆಗೆ ತಾವೇ ಸೂತ್ರಧಾರರಾಗಿದ್ದಾರೆ. ಮೆಟಾಫರ್‌ಗಳಲ್ಲೇ ಸಾಕಷ್ಟು ವಿಚಾರಗಳನ್ನು ರಿಯಲ್ ಸ್ಟಾರ್ ಹೇಳುತ್ತಾ ಹೋಗುತ್ತಾರೆ. ಜನರೆಲ್ಲಾ ನಮ್ಮ ನಮ್ಮ ಆಲೋಚನೆಯಲ್ಲೇ ಕಳೆದು ಹೋಗಿದ್ದೇವೆ. ಮೆದುಳಿನಿಂದ ಅರ್ಥಾತ್ ಆ ಆಲೋಚನೆಗಳಿಂದ ಹೊರ ಬಂದರೆ ಮಾತ್ರ ಏನಾದರೂ ಬದಲಾವಣೆ ಸಾಧ್ಯ ಎಂದು ಟೈಟಲ್ ಕಾರ್ಡ್‌ನಿಂದ ಸ್ಟೋರಿ ಹೇಳಲು ಆರಂಭಿಸುತ್ತಾರೆ.

ನಾವು ಜಾತಿ, ಧರ್ಮ ಎಂದು ಕಿತ್ತಾಡುತ್ತಿದ್ದರೆ ಉಳ್ಳವರು ನಮ್ಮ ಮತ್ತಷ್ಟು ತುಳಿದು ಬದುಕುತ್ತಾರೆ. ನಾವು ಬದಲಾಗದ ಹೊರತು ಏನು ಬದಲಾಗಲ್ಲ. ಬೇಕಿರುವುದು ಮೊಬೈಲ್, ಕ್ರಿಕೆಟ್, ರೀಲ್ಸ್, ಮಂಗಳ ಗ್ರಹಕ್ಕೆ ಹೋಗುವುದಲ್ಲ, ದೇಶದ ರಕ್ಷಣೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಲ್ಲ. ಸ್ವಚ್ಛ ಸಮಾಜ, ನ್ಯಾಯ ನೀತಿ, ಸತ್ಯ ಎಂದು ಉಪ್ಪಿ ಈಗ ನಡೆಯುತ್ತಿರೋದನ್ನೇ ಜನರ ಮುಂದೆ ತರೆದಿಟ್ಟಿದ್ದಾರೆ

ಅಲ್ಲಲ್ಲಿ ಕೆಲ ಉಪ್ಪಿ ಶೈಲಿಯ ಡೈಲಾಗ್‌ಗಳು ಪ್ರೇಕ್ಷಕರಿಗೆ ಕಿಕ್ ಕೊಡುತ್ತದೆ. “ನಮ್ಮನ್ನು ಸೃಷ್ಟಿಸಿದ ದೇವರನ್ನು ತುಳಿಯುವುದಿಲ್ಲ. ನಾವು ಸೃಷ್ಟಿಸಿದ ದೇವರನ್ನು ಬೇಕಿದ್ದರೆ ತುಳಿಯುತ್ತೇನೆ” ಎನ್ನುವ ಡೈಲಾಗ್ ಚಪ್ಪಾಳೆ ಗಿಟ್ಟಿಸುತ್ತದೆ. ಟಿಪಿಕಲ್ ಉಪ್ಪಿ ಮಾರ್ಕ್ ಚಿತ್ರದಲ್ಲಿದೆ. ಹಾಗಂತ ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸುತ್ತದೆ ಎಂದುಕೊಂಡರೆ ತಪ್ಪಾಗುತ್ತದೆ. ಬಹುತೇಕ ಸಿನಿಮಾ ಸೆಟ್‌ಗಳಲ್ಲಿ ಬರೀ ಕತ್ತಲಲ್ಲೇ ಸಾಗುವುದು ಕೊಂಚ ಇರಿಸುಮುರಿಸು ಎನಿಸದೇ ಇರದು.

ಬೆಳಗ್ಗೆ 6.30ಕ್ಕೆ ಫ್ಯಾನ್ಸ್ ಶೋ ಇದೆ. ಇದಕ್ಕೆ ಈಗಾಗಲೇ ಶೇ.85ರಷ್ಟು ಟಿಕೆಟ್‌ಗಳು ಸೇಲ್ ಆಗಿವೆ ಎನ್ನಲಾಗಿದೆ. ಇನ್ನು ವಿತರಣಾ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಅಧಿಕೃತವಾಗಿ ಎಷ್ಟು ಟಿಕೆಟ್‌ಗಳು ಸೇಲ್ ಆಗಿವೆ ಅನ್ನೋದನ್ನು ರಿವೀಲ್ ಮಾಡಿದೆ. ಹೀಗಾಗಿ ಇದನ್ನು ನೋಡಿ ಟ್ರೇಡ್‌ ಎಕ್ಸ್‌ಪರ್ಟ್‌ಗಳು ಬಾಕ್ಸಾಫೀಸ್‌ ಲೆಕ್ಕಾಚಾರ ಹಾಕಿದ್ದಾರೆ. ಅಡ್ವಾನ್ಸ್ ಬುಕಿಂಗ್ ಆಧಾರದ ಮೇಲೆ ಮೊದಲ ದಿನ ಅಂದಾಜು 8 ರಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು ಎಂದು ಕರ್ನಾಟಕದ ವಿತರಕರ ವಲಯ ನಿರೀಕ್ಷೆ ಮಾಡಿದೆ.

ಯುಐ’ ಟಿಪಿಕಲ್ ಉಪೇಂದ್ರ ಸಿನಿಮಾ. ಹಿಂದಿ ಆಡಿಯನ್ಸ್ ತಲೆಗೆ ಹುಳ ಬಿಟ್ಟುಕೊಂಡು ಸಿನಿಮಾ ನೋಡುವುದಿಲ್ಲ. ಈ ಕಾರಣಕ್ಕೆ ಹಿಂದಿ ಏರಿಯಾದಲ್ಲಿ ‘ಯುಐ’ ಸಿನಿಮಾಗೆ ರೆಸ್ಪಾನ್ಸ್ ಹೇಗೆ ಸಿಗುತ್ತೆ ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಮೊದಲ ದಿನ ಹೆಚ್ಚು ಟಿಕೆಟ್‌ಗಳು ಸೇಲ್ ಆಗದೇ ಹೋದರೂ, ಫಸ್ಟ್ ಡೇ ರಿಪೋರ್ಟ್ ಮೇಲೆ ‘ಯುಐ’ ಭವಿಷ್ಯ ನಿಂತಿದೆ. ಹಿಂದಿ ಬೆಲ್ಟ್‌ನಲ್ಲಿ ಅದ್ಭುತ ಕಲೆಕ್ಷನ್‌ ಆದರೆ, ‘ಯುಐ’ ದಾಖಲೆ ಮಾಡೋದು ಗ್ಯಾರಂಟಿ.

RELATED ARTICLES

Related Articles

TRENDING ARTICLES