Friday, December 20, 2024

ಸದನದ ಆಡಿಯೋ, ವಿಡಿಯೋ ಚೆಕ್​ ಮಾಡಿದ್ದೇನೆ, ಬೈದಿರುವ ಬಗ್ಗೆ ಯಾವುದೇ ದಾಖಲೆ ಸಿಕ್ಕಿಲ್ಲ :ಪರಿಷತ್​ ಸಭಾಪತಿ

ಹುಬ್ಬಳ್ಳಿ : ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಗದ್ದಲ ಆರಂಭಿಸಿತ್ತು. ಈ ವೇಳೆ ಬಿಜೆಪಿ ಸಹ ಪ್ರತಿಭಟನೆಗಳಿಯಿತು. ಇದರ ಪರಿಣಾಮ ಕಲಾಪ ಮುಂದೂಡಬೇಕಾಯಿತು ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ನಿನ್ನೆ ನಡೆದ ಘಟನೆ ಯಾರಿಂದ ಶುರುವಾಯಿತು ಎಂದು ವಿವರಿಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌-ಬಿಜೆಪಿ ಸದಸ್ಯರ ನಡುವೆ ಗಲಾಟೆ ಜೋರಾದ ನಂತರವೇ ಕಲಾಪ ಮುಂದೂಡಲಾಯಿತು. ಬಳಿಕ ಸದನದ ಮೈಕ್, ಆಡಿಯೋ ವಿಡಿಯೋ ಎಲ್ಲವೂ ಬಂದ್ ಮಾಡಿದ್ದರು. ಆದರೆ ಇದಾದ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಬಂದು ನನಗೆ ‘ಪ್ರಾಸ್ಟಿಟ್ಯೂಟ್’ ಅಂತಾ ಕರೆದಿದ್ದಾರೆ ಎಂದರು. ಪದೇಪದೆ ಆ ಪದ ಬಳಕೆ ಮಾಡಿದ್ದಾರೆ ಎಂದು ದೂರಿದರು. ನಾನು ಆಡಿಯೋ ವಿಡಿಯೋ ಎಲ್ಲವನ್ನೂ ಚೆಕ್ ಮಾಡಿದೆ. ಹಾಗೆ ಬೈದ ಬಗ್ಗೆ ಆಗ ಯಾವುದೇ ದಾಖಲೆ ಸಿಕ್ಕಿಲ್ಲ.

ಇದನ್ನೂ ಓದಿ: ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಪೋಟ : ಓರ್ವ ಸಾವು, 7 ಜನರಿಗೆ ಗಾಯ !

ಆದರೆ ಕೆಲ ಮಾಧ್ಯಮಗಳಲ್ಲಿ ಇದರ ಕುರಿತು ಬಂದಿದೆ. ನಾನು ಕೂಡ ಲಕ್ಷ್ಮೀ ಹೆಬ್ಬಳ್ಕರ್​  ಹಾಗೂ ಸಿ.ಟಿ ರವಿಯನ್ನು ಕರೆದು ಮಾತನಾಡಿದ್ದೇನೆ. ಇದೆಲ್ಲವನ್ನು ಇಲ್ಲಿಗೆ ಮುಗಿಸೋಣ ಎಂದು ಹೇಳಿದೆ. ಆದರೆ ಸಿ.ಟಿ ರವಿ ನಾನು ಪ್ರಸ್ಟ್ರೇಟ್​ ಆಗಿದ್ದೀರ ಎಂದು ಹೇಳಿದೆ, ಅದನ್ನು ಅವರಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸಿ,ಟಿ ರವಿ ಹೇಳಿದರು.

ಸದನದಲ್ಲಿ ಈ ರೀತಿಯಾಗಿರುವುದು ಇದೆ ಮೊದಲು. ಸದನದಲ್ಲಿ ಪೊಲೀಸರು ಬರಲು ಅನುಮತಿ ನೀಡಿಲ್ಲ. ಪೊಲೀಸರು ಅನುಮತಿ ಕೇಳಿದರು ಕೂಡ ನಾನು ಅನುಮತಿಯನ್ನು ತಿರಸ್ಕರಿಸಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES