ದೆಹಲಿ : ಮೂರು ವರ್ಷಗಳ ಹಿಂದೆ ಹೆಲಿಕಾಪ್ಟರ್ ದುರಂತದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಅವರು ನಿಧನಹೊಂದಿದ್ದು, ಹೆಲಿಕಾಪ್ಟರ್ ಪತನಕ್ಕೆ ಮಾನವ ಲೋಪವೇ ಕಾರಣ ಎಂದು ರಕ್ಷಣಾ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
2021ರ ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರು ಬಳಿಯ ಪರ್ವತ ಪ್ರದೇಶದಲ್ಲಿ Mi-17 V5 ಹೆಲಿಕಾಪ್ಟರ್ ಪತನಗೊಂಡಿತ್ತು. ಈ ಅವಘಡದಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಒಟ್ಟು 12 ಮಂದಿ ಸಾವನ್ನಪ್ಪಿದರು. ಇದೀಗ ಘಟನೆ ನಡೆದು ಮೂರೂ ವರ್ಷಗಳ ಬಳಿಕ ಸಂಸತ್ತಿನ ಸ್ಥಾಯಿ ಸಮಿತಿಯು ಲೋಕಸಭೆಯಲ್ಲಿ ರಾವತ್ ಅವರ ಸಾವಿನ ಕುರಿತು ತನಿಖಾ ವರದಿಯನ್ನು ಮಂಡಿಸಿದ್ದು ಹೆಲಿಕಾಪ್ಟರ್ ಅವಘಡಕ್ಕೆ ಮಾನವ ಲೋಪವೇ ಕಾರಣ ಎಂದು ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಭೀಕರ ಅಪಘಾತ : ಐವರು ಸ್ಥಳದಲ್ಲೇ ಸಾವು, 37 ಮಂದಿಗೆ ಗಾಯ !
ಸಂಸತ್ತಿನ ಸ್ಥಾಯಿ ಸಮಿತಿ ಸಲ್ಲಿಸಿದ ವರದಿಯಲ್ಲಿ 2017 ರಿಂದ 2022 ರ ವರೆಗೆ ಭಾರತೀಯ ವಾಯು ಸೇನೆಯಲ್ಲಿ ಒಟ್ಟು 34 ಅವಘಡಗಳು ಸಂಭವಿಸಿರುವುದಾಗಿ ಉಲ್ಲೇಖಿಸಿದೆ ಜೊತೆಗೆ 2021-2022ರ ಅವಧಿಯಲ್ಲಿ ಒಟ್ಟು ಒಂಬತ್ತು ಅಪಘಾತಗಳು ಸಂಭವಿಸಿವೆ ಎಂದು ವರದಿ ತಿಳಿಸಿದೆ