ದಾವಣಗೆರೆ : ಪರಿಷತ್ತು ಸದಸ್ಯ ಸಿಟಿ ರವಿಗೆ ಜಾಮೀನು ಸಿಕ್ಕ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ ರಾಜ್ಯ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು. ಹೈಕೋರ್ಟ್ ತೀರ್ಪು ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದಂತಾಗಿದೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಮಾಚಿ ಸಚಿವ ರೇಣುಕಾಚಾರ್ಯ ಸಿ,ಟಿ ರವಿ ಬಿಡುಗಡೆಗೆ ಹರ್ಷ ವ್ಯಕ್ತಪಡಿಸಿದ್ದು. ‘ಹೈಕೋರ್ಟ್ ತೀರ್ಪು ಸತ್ಯಕ್ಕೆ ಸಂದ ಜಯವಾಗಿದೆ. ಈ ತೀರ್ಪಿನಿಂದ ರಾಜ್ಯ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದಂತೆ ಆಗಿದೆ. ಈ ಸರ್ಕಾರದವರು ಹಿಂದೂ ಹೋರಾಟಗಾರನನ್ನ ಬಂಧಿಸಿ ಕಿರುಕುಳ ಕೊಟ್ಟರು ಅದಕ್ಕೆ
ಜನ ಸರ್ಕಾರಕ್ಕೆ ಛೀಮಾರಿ ಹಾಕ್ತಾ ಇದ್ದಾರೆ ಎಂದು ರಾಜ್ಯ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ರೇಣುಕಾಚಾರ್ಯ ‘ ಸ್ಪೀಕರ್ ಸಾಕ್ಷ್ಯ ಇಲ್ಲ ಅಂತ ಹೇಳಿದರು ಕೂಡ ಬಂದಿಸಿದರು,
ಸುವರ್ಣ ಸೌಧ ದೇವಾಲಯ ಇದ್ದ ಹಾಗೆ, ಅಲ್ಲಿ ಕಿಡಗೇಡಿಗಳು ನುಗ್ಗಿದ ಗಲಾಟೆ ಮಾಡಿ ಹಲ್ಲೆ ಮಾಡ್ತಾರೆ, ತಲೆಗೆ ಕಲ್ಲು ಹೊಡೆದಿದ್ದಾರೆ, ರಾಜ್ಯದಲ್ಲಿ ಗೂಂಡಾ ಭಯೋತ್ಪಾದಕ ಸರ್ಕಾರ ಇದೆ. ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಕಾಂಗ್ರೆಸ್ ನಿಸ್ಸೀಮರು. ಸುಳ್ಳು ನೂರು ಸಾರಿ ಹೇಳಿದ್ರು ಸತ್ಯ ಆಗಲ್ಲ ಅದು ಸತ್ಯಕ್ಕೆ ಇದು ಸಂದ ಜಯ ಎಂದು ಹೇಳಿದರು.