ಕೊಪ್ಪಳ : ಸಿ,ಟಿ ರವಿ ಬಂಧನ ವಿಚಾರವಾಗಿ ಮಾತನಾಡಿದ ಬಿಜೆಪಿ ಎಂಎಲ್ಸಿ ಹೇಮಲತಾ ನಾಯಕ್ ‘ ಸಿ,ಟಿ ರವಿ ಒಬ್ಬ ಸುಸಂಕ್ಕೃತ ವ್ಯಕ್ತಿ, ಅವರು ಆ ರೀತಿಯಾಗಿ ಕೂಗಿಲ್ಲ. ಕಾಂಗ್ರೆಸ್ನವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.
ಕೊಪ್ಪಳ ನಗರದಲ್ಲಿ ಬಿಜೆಪಿ ಎಂಎಲ್ಸಿ ಹೇಮಲತಾ ನಾಯಕ್ ಹೇಳಿಕೆ ನೀಡಿದ್ದು. ‘ ನಾವೆಲ್ಲರು ಸಿ,ಟಿ ರವಿ ಅವರ ಬಳಿಯಲ್ಲಿದ್ದೆವು. ಆದರೆ ಅವರು ಆ ರೀತಿಯಾಗಿ ಹೇಳಿರುವುದು ನಮಗೆ ಕೇಳಿಸಿಲ್ಲ, ಆದರೆ ಅದು ಅವರಿಗೆ ಹೇಗೆ ಕೇಳಿಸಿದೆ.
ಇದನ್ನೂ ಓದಿ: ಸಿ.ಟಿ.ರವಿ ಬಂಧನಕ್ಕೆ ಖಂಡನೆ ವ್ಯಕ್ತಪಡಿಸಿದ ಉಪ ಸಭಾಪತಿ ಎಂ.ಕೆ ಪ್ರಾಣೇಶ್
ಸಿ.ಟಿ ರವಿ ಅವರು ಆ ರೀತಿಯಾಗಿ ಕೂಗಿಲ್ಲ, ಓರ್ವ ಮಹಿಳೆಗೆ ಆ ರೀತಿಯಾಗಿ ಹೇಳಿದ್ದರೆ ಯಾವುದೇ ಮಹಿಳೆಯು ಸಹಿಸೊದಿಲ್ಲ. ಅದರೆ ಕಾಂಗ್ರೆಸ್ನವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಸಿ,ಟಿ ರವಿ ಓರ್ವ ಸುಸಂಕ್ಕೃತ ವ್ಯಕ್ತಿಯಾಗಿದ್ದಾರೆ. ಅವರು ನಮಗೆ ಅಮ್ಮಾ, ಅಕ್ಕ ಎಂದು ಗೌರವ ಸೂಚಿಸುತ್ತಾರೆ. ಅಂತಹ ವ್ಯಕ್ತಿಯ ಮೇಲೆ ಇಂತಹ ಆರೋಪ ಮಾಡುವುದು ಸಹಿಸೋದಕ್ಕೇ ಆಗೋದಿಲ್ಲ ಎಂದು ಹೇಳಿದರು.