Friday, December 20, 2024

ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಪೋಟ : ಓರ್ವ ಸಾವು, 7 ಜನರಿಗೆ ಗಾಯ !

ಶಿವಮೊಗ್ಗ : ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಪೋಟಗೊಂಡ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು. 7 ಜನರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಸ್ಪೋಟದ ಪರಿಣಾಮವಾಗಿ ರೈಸ್​ಮಿಲ್​ ಪಕ್ಕದಲ್ಲಿದ್ದ ಮನೆಗಳಿಗ ಸಾಕಷ್ಟು ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಚನ್ನಗಿರಿ ರಸ್ತೆಯಲ್ಲಿರುವ  ಆರ್‌ಎಂಸಿ ಮುಂಭಾಗದ ರೈಸ್ ಮಿಲ್ ನಲ್ಲಿ ಘಟನೆ ನಡೆದಿದ್ದು. ಗಣೇಶ್​ ರೈಸ್​ಮಿಲ್​ನಲ್ಲಿ ಬಾಯ್ಲರ್​ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ. ಸ್ಪೋಟಗೊಂಡ ಸ್ಥಳದಲ್ಲಿದ್ದ 7 ಜನರಿಗೆ ಗಾಯವಾಗಿದ್ದು. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಸ್ಪೋಟಗೊಂಡ ಸ್ಥಳದಲ್ಲಿ ಕಾಣೆಯಾಗಿದ್ದ ರಘು ಎಂಬ ವ್ಯಕ್ತಿಯ ಶವ ಇಂದು ಬೆಳಗಿನ ಜಾವ  ಪತ್ತೆಯಾಗದೆ. ಸ್ಪೋಟಗೊಂಡ ಹಿನ್ನಲೆಯಲ್ಲಿ ಸಾಕಷ್ಟು ಆಸ್ತಿಗೆ ಹಾನಿಯಾಗಿದ್ದು. ಅಕ್ಕಪಕ್ಕದಲ್ಲಿದ್ದ ಒಂದೆರಡು  ಮನೆಗಳಿಗೂ ಸಹ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂದಿರುವ ಅಗ್ನಿಶಾಮಕ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES