ಮಂಡ್ಯ : ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಸಿ.ಟಿ ರವಿ ಬಂಧನದ ಬಗ್ಗೆ ಮಾಧ್ಯಮದ ಜೊತಗೆ ಮಾತನಾಡಿದ್ದು ‘ ಸಿ.ಟಿ ರವಿಗೆ ಜೀವ ಭಯವಿದೆ ಎಂಬ ವಿಚಾರಕ್ಕೆ ಮಾತನಾಡಿದ ಸಿಎಂ, ಎಲ್ಲಾ ಅಪರಾಧಿಗಳು ಇದೇ ರೀತಿಯಾಗಿ ಹೇಳುತ್ತಾರೆ, ಆಗಂತ ಅವರನ್ನು ಪ್ರಾಸಿಕ್ಯೂಟ್ ಮಾಡಬಾರದ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಒಬ್ಬ ಹೆಣ್ಣುಮಗಳಿಗೆ ಬಹಳ ತುಚ್ಚೀಕರಣವಾಗಿ, ಅವಹೇಳನಕಾರಿಯಾಗಿ ಮಾತಾಡಿದರು ಸಿ.ಟಿ ಮಾತನಾಡಿದ್ದಾರೆ, ಆದರೂ ಕೂಡ ಬಿಜೆಪಿಯವರು ಅವರಿಗೆ ಸಪೋರ್ಟ್ ಮಾಡುತ್ತಾರಾ ? ಸಿ.ಟಿ ರವಿಯಾದರೂ ನಾನು ತಪ್ಪೂ ಮಾಡಿದ್ದೀನಿ, ಅವಚ್ಯಾ ಶಬ್ದಗಳಿಂದ ಮಾತನಾಡಿದ್ದೀನಿ ಅಂತಾ ಒಪ್ಪಿಕೊಳ್ತಾರಾ ಎಂದು ಹೇಳಿದರು.
ಸಿ.ಟಿ ರವಿ ಹೆಣ್ಣು ಮಕ್ಕಳ ಮೇಲೆ ಯಾಕೆ ಆ ಪದ ಬಳಸಿದನೋ ಗೊತ್ತಿಲ್ಲ, ಆದರೆ ಇದೊಂದು ಅಪರಾಧ, ಸಿ,ಟಿ ರವಿ ಪ್ರೆಸ್ಸ್ಟ್ರೇಷನ್ ಅಂತಾ ಪದ ಬಳಸಿದೆ ಎಂದು ಹೇಳ್ತಾನೆ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಲಕ್ಷ್ಮೀ ಅವಾಚ್ಯ ಶಬ್ದ ಬಳಸಿದ್ರು ಎಂದು ಹೇಳ್ತಾರೆ.
ಸಿ.ಟಿ ರವಿಗೆ ಜೀವ ಭಯ ವಿಚಾರವಾಗಿ ಸಿಎಂ ಮಾತು !
ಜೀವ ಭಯ ಇದೆ ಅನ್ನೋ ಸಿಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ‘ ಎಲ್ಲಾ ಅಪರಾಧಿಗಳು ಜೀವ ಭಯ ಇದೆ ಅಂತಾ ಹೆಳ್ತಾರೆ. ಆಗಂತಾ ಪ್ರಾಸಿಕ್ಯೂಟ್ ಮಾಡೋ ಹಾಗಿಲ್ವ. ಸಿಟಿ ರವಿ ಹಿತದೃಷ್ಟಿಯಿಂದಲೇ ಪೋಲೀಸರು ಓಡಾಡಿಸಿದ್ದಾರೆ.ಜನ ಗಲಾಟೆ ಮಾಡ್ತಾರೆ ಅಂತಾ ಸುತ್ತಾಡಿಸಿದ್ದಾರೆ’ ಎಂದು ಸಿಎಂ ಸಿದ್ದರಾಮಯ್ಯ ಮಂಡ್ಯದಲ್ಲಿ ಹೇಳಿಕೆ ನೀಡಿದರು.