Sunday, January 19, 2025

70 ಲಕ್ಷ ಬಿಲ್​ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ ನೋಟಿಸ್​ : ಉಚಿತ ನೀರು ನೀಡುತ್ತೇವೆ ಎಂದ ಎಂ.ಬಿ ಪಾಟೀಲ್​

ತುಮಕೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ರಾಜ್ಯ ಸರ್ಕಾರ ಸಿದ್ದಗಂಗಾ ಮಠಕ್ಕೆ ಶಾಕ್ ಕೊಟ್ಟಿದೆ. ಸರ್ಕಾರಿ ನೀರಾವರಿ ಯೋಜನೆಗೆ ಕೆಐಎಡಿಬಿ ಬಳಸಿದ ಬರೊಬ್ಬರಿ 70,31,438 ರೂ. ವಿದ್ಯುತ್ ಬಿಲ್‌ನ್ನು ಸಿದ್ದಗಂಗಾ ಮಠ ಭರಿಸುವಂತೆ ಕೆಐಎಡಿಬಿ ಪತ್ರ ಬರೆದಿದೆ. ಮಂಡಳಿಯ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ಈ ವಿದ್ಯುತ್ ಬಿಲ್ ಅನ್ನು ಭರಿಸುವಂತೆ ಕೋರಲಾಗಿದೆ ಎಂದು ಪತ್ರದಲ್ಲಿ ಒಕ್ಕಣೆ ಬರೆಯಲಾಗಿದೆ.

ಸಿದ್ದಗಂಗಾ ಮಠದ ಸನಿಹದಲ್ಲೇ ಇರುವ ದೇವರಾಯಪಟ್ಟಣ ಕೆರೆಗೆ ಕೆಐಎಡಿಬಿ ಪೈಪ್‌ಲೈನ್ ಮೂಲಕ ಹೊನ್ನೆನಹಳ್ಳಿಯಿಂದ ಪ್ರಾಯೋಗಿಕವಾಗಿ ನೀರು ಹರಿಸಿದೆ. ಈ ಯೋಜನೆ ಪರಿಪೂರ್ಣವಾಗಿ ಜಾರಿಯಾದರೆ ಸಿದ್ದಗಂಗಾ ಮಠ ಸೇರಿದಂತೆ ದೇವರಾಯಪಟ್ಟಣ, ಮಾದನಾಯಕನ ಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಕೆ ಆಗಲಿದೆ. ಇಲ್ಲಿವರೆಗೆ ಪ್ರಾಯೋಗಿಕವಾಗಿ ಅಷ್ಟೇ ನೀರು ಹರಿಸಲಾಗಿದೆ. ಗ್ರಾಮಗಳಿಗೆ ವಿತರಣೆ ಆಗುತ್ತಿಲ್ಲ. ಇದಕ್ಕೆ ವೆಚ್ಚವಾದ ವಿದ್ಯುತ್ ಬಿಲ್‌ನ್ನು ಸಿದ್ದಗಂಗಾ ಮಠ ಪಾವತಿಸಬೇಕು ಎಂದು ಕೆಐಎಡಿಬಿ ಬರೆದಿರುವ ಪತ್ರ ಈಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ನಾಟಿ ಕೋಳಿಗೆ ವಿಷವಿಟ್ಟ ದುರುಳರು : ಸತ್ತ ಕೋಳಿಯ ಬಾಯಿಂದ ಬರುತ್ತಿದೆ ಬೆಂಕಿ !

ಸುದ್ದಿ ಬಿತ್ತರವಾಗುತ್ತಿದ್ದಂತೆ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದ್ದು. ಉಚಿತ ಭಾಗ್ಯದಿಂದ ಸರ್ಕಾರ ಭರಿದಾಗಿದೆಯ ಎಂಬ ಪ್ರಶ್ನೆ ಜನರ ಎದುರು ಕಾಡುತ್ತಿದೆ. ನೀರಿನ ತೆರಿಗೆಯನ್ನು ಕಟ್ಟಬೇಕು ಆದರೆ ಇಡೀ ಕೆರೆಗೆ ನೀರು ತುಂಬಿಸಿದ ಯೋಜನೆಗೆ ಮಠ ಯಾಕೆ ಹಣವನ್ನು ಕಟ್ಟಬೇಕು ಎಂಬ ಪ್ರಶ್ನೆಗಳು ಉಧ್ಬವವಾಗಿದೆ.

ಬಿಲ್​ ಕಡಿತಗೊಳಿಸುತ್ತೇವೆ ಎಂದ ಎಂ.ಬಿ ಪಾಟೀಲ್​ !

ಕೆಐಡಿಬಿಐ ನಿಂದ 70 ಲಕ್ಷ ಬಿಲ್ ಪಾವತಿಗೆ ಸಿದ್ದಗಂಗಾ ಮಠಕ್ಕೆ ನೋಟಿಸ್ ವಿಚಾರವಾಗಿ ಪವರ್​ ಟಿವಿಯೊಂದಿಗೆ ಮಾತನಾಡಿದ ಬೃಹತ್​ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್​ ‘ ಮಠವು ಕೂಡ ಕೆರೆಯ ನೀರನ್ನು ಬಳಸಿಕೊಳ್ಳುತ್ತಿತ್ತು. ಮತ್ತು ಎಷ್ಟು ಪ್ರಮಾಣದಲ್ಲಿ ನೀರನ್ನು ಬಳಸುತ್ತಿದೆ ಎಂದು ಪರಿಶೀಲನೆ ನಡೆಸುತ್ತೇವೆ. ಮಠ ಸುಮಾರು 10 ಸಾವಿರ ವಿಧ್ಯಾರ್ಥಿಗಳಿಗೆ ವಿಧ್ಯಾದಾನ ಮಾಡುತ್ತಿದೆ. ಅವರು ನೀರನ್ನು ಬಳಸಿದರು ತಪ್ಪಿಲ್ಲ, ಆದರೆ ಪರಿಶೀಲನೆ ನಡೆಸಿ ಬಿಲ್​ ಕಡಿತಗೊಳಿಸುತ್ತೇವೆ. ಬೇಕಾದರೆ ಮುಂದೆ ಉಚಿತವಾಗಿ ನೀರನ್ನು ಸರಬರಾಜು ಮಾಡುತ್ತೇವೆ ಎಂದು ಹೇಳಿದರು.

 

 

RELATED ARTICLES

Related Articles

TRENDING ARTICLES