Wednesday, January 22, 2025

ನನ್ನ ಸಾಲಕ್ಕಿಂತ ಹೆಚ್ಚು ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ : ವಿಜಯ್​ ಮಲ್ಯ

ದೆಹಲಿ : ಜಾರಿ ನಿರ್ದೇಶನಾಲಯ ಹಾಗೂ ಬ್ಯಾಂಕ್​ಗಳು ಕಾನೂನುಬದ್ಧವಾಗಿ ಹೇಗೆ ಸಾಲದ ಎರಡು ಪಟ್ಟು ಹಣವನ್ನು ವಸೂಲಿ ಮಾಡಿದೆ? ಇದನ್ನು ಸರ್ಕಾರ ಕಾನೂನು ಬದ್ಧವಾಗಿ ಸಮರ್ಥಿಸಿಕೊಳ್ಳಬೇಕು. ಇಲ್ಲದಿದ್ದರೆ, ಪರಿಹಾರಕ್ಕೆ ನಾನು ಅರ್ಹ.

ಸಾಲ-ಬಡ್ಡಿಗಿಂತ 2 ಪಟ್ಟು ಹೆಚ್ಚಿನ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದೀರಿ, ನಾನೀಗಲು ಆರ್ಥಿಕ ಅಪರಾಧಿಯಾಗಲು ಹೇಗೆ ಸಾಧ್ಯ ಎಂದು ಉದ್ಯಮಿ ಹಾಗೂ ಮದ್ಯದ ದೊರೆ ವಿಜಯ್ ಮಲ್ಯ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬಾರಿಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಿ ಮಂಗಳಮುಖಿ ನೇಮಕ !

ಲೋಕಸಭೆಯಲ್ಲಿ ಬ್ಯಾಂಕ್‌ಗೆ ವಂಚಿಸಿ ಪರಾರಿಯಾಗಿರುವ ಶ್ರೀಮಂತ ಉದ್ಯಮಿಗಳ ವಿರುದ್ದ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ, ಜನಸಮಾನ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಮೋದಿ ಸರ್ಕಾರ ಶ್ರೀಮಂತರ ಪರವಾಗಿದೆ ಅನ್ನೋ ಆರೋಪ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮನ್ ಅವರು, ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ತಪ್ಪು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದು ಹೇಳಿದ್ದರು.

ಇದೇ ವೇಳೆ ಮೂವರು ಉದ್ಯಮಿಗಳ ವಂಚನೆ ಪ್ರಕರಣ ಉಲ್ಲೇಖಿಸಿ ನಿರ್ಮಾಲಾ ಸೀತಾರಾಮನ್ ವಶಪಡಿಸಿಕೊಂಡ ಆಸ್ತಿ ಮೌಲ್ಯದ ಮಾಹಿತಿ ನೀಡಿದ್ದರು. ಪರಾರಿಯಾಗಿರುವ ಉದ್ಯಮಿಯ ಸಾಲದ ಒಂದು ಭಾಗವನ್ನು ಪಾವತಿಸಲು 14,131 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES