Sunday, January 19, 2025

ಸಂಸತ್​ನಲ್ಲಿ ಭಾರಿ ಹೈಡ್ರಾಮ : ಬಿಜೆಪಿ ಸಂಸದನನ್ನು ಮೆಟ್ಟಿಲ ಮೇಲಿಂದ ಕೆಳಗೆ ತಳ್ಳಿದ ರಾಹುಲ್​ ?

ದೆಹಲಿ : ಸಂಸತ್ತಿನಲ್ಲಿ ಬಿಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಗುರಿಯಾಗಿಟ್ಟುಕೊಂಡು ಏಕಕಾಲದಲ್ಲಿ ಪ್ರತಿಭಟನೆ ನಡೆಸುವುದರೊಂದಿಗೆ ಸಂಸತ್ತಿನ ಆವರಣವು ಸೋಮವಾರ ಹೈವೋಲ್ಟೇಜ್ ರಾಜಕೀಯ ನಾಟಕಕ್ಕೆ ಸಾಕ್ಷಿಯಾಗಿದೆ. ಈ ವೇಳೆ ಬಿಜೆಪಿ ಸಂಸದ ಪ್ರತಾಪ್​ ಸಾರಂಗ್ ಮೆಟ್ಟಿಲ ಮೇಲಿಂದ ಬಿದ್ದು  ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಸಂಸದರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು, ಆದರೆ ಕಾಂಗ್ರೆಸ್ ಕೇಂದ್ರ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಕಾಂಗ್ರೆಸ್​​ ಸರ್ಕಾರ ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು  ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಗಾಂಧಿ ಕುಟುಂಬವನ್ನು ಟೀಕಿಸಿದರು.

ಇದನ್ನೂ ಓಧಿ : ನಾಟಿ ಕೋಳಿಗೆ ವಿಷವಿಟ್ಟ ದುರುಳರು : ಸತ್ತ ಕೋಳಿಯ ಬಾಯಿಂದ ಬರುತ್ತಿದೆ ಬೆಂಕಿ ! 

ಈ ವೇಳೆ ಕೇಂದ್ರ ಸಚಿವ ಗಿರಿರಾಹ್​ ಸಿಂಗ್​ “ಕಾಂಗ್ರೆಸ್ ಬಾಬಾಸಾಹೇಬರನ್ನು ಅಗೌರವಿಸಿ ದೊಡ್ಡ ಅಪರಾದ ಮಾಡಿದೆ. ಇಡೀ ಗಾಂಧಿ ಕುಟುಂಬವು ಭಾರತ ರತ್ನವನ್ನು ಸ್ವೀಕರಿಸಿದೆ, ಆದರೆ  ಅವರು ಬಾಬಾಸಾಹೇಬರಿಗೆ ಭಾರತರತ್ನವನ್ನು ನಿರಾಕರಿಸಿದರು. ಈ ತಪ್ಪಿಗಾಗಿ ಕಾಂಗ್ರೆಸ್ ಪಕ್ಷವು 24 ಗಂಟೆಗಳ ಉಪವಾಸವನ್ನು ಆಚರಿಸಬೇಕು ಮತ್ತು ಅವರ ತಪ್ಪುಗಳಿಗೆ ಪ್ರಾಯಶ್ಚಿತ್ತವಾಗಿ ಮೌನವಾಗಿ ಪ್ರತಿಜ್ಞೆ ಮಾಡಬೇಕು” ಎಂದು ಸಿಂಗ್ ಹೇಳಿದರು.

 

ಸಂಸತ್​ ಗೋಡೆ ಏರಿ ಪ್ರತಿಭಟನೆ ನಡೆಸಿದ INDIA ಬ್ಲಾಕ್​​ ಸಂಸದರು !

INDIA ಒಕ್ಕೂಟದ ಸಂಸದರು ಸಂಸತ್ತಿನ ಮುಖ್ಯ ದ್ವಾರವಾದ ಮಕರ ದ್ವಾರದ ಗೋಡೆಗಳನ್ನು ಏರಿದರು, ಕ್ಷಮೆಯಾಚಿಸುವಂತೆ ಮತ್ತು ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸುವ ಫಲಕಗಳನ್ನು ಹಿಡಿದುಕೊಂಡರು. ಈ ವೇಳೆ ತಳ್ಳಾಟ-ನೂಕಾಟವಾಗಿದ್ದು ಬಿಜೆಪಿ ಸಂಸದರ ತಲೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಸಂಸದರನ್ನು ಕೆಳಗೆ ತಳ್ಳಿದರಾ ರಾಹುಲ್​ !

ಪ್ರತಿಭಟನೆ ವೇಳೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತ್ತೊಬ್ಬ ಬಿಜೆಪಿ ಸಂಸದ ಪ್ರತಾಪ್​ ಸಾರಂಗಿಯನ್ನು ಕೆಳಗೆ ತಳ್ಳಿದ್ದರಿಂದ ಅವರು ಗಾಯಗೊಂಡಿದ್ದಾರೆ ಎಂದು ಬಿಜೆಪಿಯವರು ಆರೋಪಿಸಿದ್ದಾರೆ.

ಇದರ ಕುರಿತು ಪ್ರತಾಪ್​ ಸಿಂಗ್​ ಸಾರಂಗಿ ಹೇಳಿಕೆ ನೀಡಿದ್ದು. “ನನ್ನ ಮೇಲೆ ಬಿದ್ದ ಸಂಸದರನ್ನು ರಾಹುಲ್ ಗಾಂಧಿ ತಳ್ಳಿದರು, ನಂತರ ನಾನು ಕೆಳಗೆ ಬಿದ್ದೆ … ನಾನು ಮೆಟ್ಟಿಲುಗಳ ಬಳಿ ನಿಂತಿದ್ದಾಗ ರಾಹುಲ್ ಗಾಂಧಿ ಬಂದು ನನ್ನ ಮೇಲೆ ಬಿದ್ದ ಸಂಸದನನ್ನು ತಳ್ಳಿದರು” ಎಂದು ಹೇಳಿದ್ದಾರೆ.

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್​ ಗಾಂಧಿ ‘ ನಾನು ಸಂಸತ್ತಿನ ಪ್ರವೇಶ ದ್ವಾರದ ಮೂಲಕ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದೆ, ಬಿಜೆಪಿ ಸಂಸದರು ನನ್ನನ್ನು ತಡೆಯಲು ಪ್ರಯತ್ನಿಸಿದರು, ನನ್ನನ್ನು ತಳ್ಳಲು ಮತ್ತು ನನಗೆ ಬೆದರಿಕೆ ಹಾಕಲು ಪ್ರಯತ್ನಿಸಿದರು. ಹಾಗಾಗಿ ಇದು ಸಂಭವಿಸಿದೆ. ಹೌದು, ಇದು ಸಂಭವಿಸಿದೆ (ಮಲ್ಲಿಕಾರ್ಜುನ ಖರ್ಗೆ ಅವರನ್ನು ತಳ್ಳಲಾಯಿತು) ,” ಎಂದು ರಾಹುಲ್​ ಗಾಂಧಿ ಹೇಳಿದರು .

RELATED ARTICLES

Related Articles

TRENDING ARTICLES