Wednesday, December 18, 2024

ತಿಮ್ಮಪ್ಪನ ದರ್ಶನ​ ಕೇವಲ ಒಂದು ಗಂಟೆಯಲ್ಲಿ : AI ತಂತ್ರಜ್ಞಾನ ಬಳಕೆಗೆ ಮುಂದಾದ ಟಿಟಿಡಿ !

ತಿರುಮಲ : ಭಕ್ತರು ಸರತಿ ಸಾಲು ಸೇರಿದ ಒಂದೇ ತಾಸಿನಲ್ಲಿ ತಿರುಮಲ ವೆಂಕಟೇಶ್ವರನ ದರ್ಶನ ಲಭಿಸುವಂತೆ ಮಾಡುವುದು ನಮ್ಮ ಗುರಿ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್​ ನಾಯ್ಡು ಹೇಳಿದ್ದಾರೆ.

ಮಾಧ್ಯಮದವೊಂದರ ಸಂದರ್ಶನದಲ್ಲಿ ಮಾತಾಡಿದ ಅವರು, ನಮ್ಮ ಮಹತ್ವಾಕಾಂಕ್ಷೆ ಗುರಿ ಪ್ರತಿಯೊಬ್ಬ ಭಕ್ತನಿಗೆ ಒಂದು ಗಂಟೆಯೊಳಗೆ ವೆಂಕಟೇಶ್ವರನ ದರ್ಶನವನ್ನು ಒದಗಿಸುವುದು. ಇದನ್ನು ಸಾಧಿಸಲು, ನಾವು ವಿಮಾನ ನಿಲ್ದಾಣಗಳಲ್ಲಿ ಬಳಸುವ ಡಿಜಿ ಯಾತ್ರಾ ವ್ಯವಸ್ಥೆಯಿಂದ ಪ್ರೇರಿತವಾದ ಕೃತಕ ಬುದ್ಧಿಮತ್ತೆ-ಚಾಲಿತ (ಎಐ ಚಾಲಿತ) ಮುಖ ಗುರುತಿಸುವಿಕೆ ವ್ಯವಸ್ಥೆ ಪರಿಚಯಿಸುತ್ತಿದ್ದೇವೆ.

ರೈಲ್ವೆನಿಲ್ದಾಣ, ಬಸ್ ನಿಲ್ದಾಣ, ಅಲಿಪಿರಿ ಸೇರಿದಂತೆ 20 ಆಯಕಟ್ಟಿನ ಸ್ಥಳಗಳಲ್ಲಿ ಭಕ್ತರ ಮುಖವನ್ನು ಸ್ಕ್ಯಾನ್​ ಮಾಡಲಾಗುತ್ತದೆ ಮತ್ತು ದರ್ಶನಕ್ಕೆ ನಿರ್ದಿಷ್ಟ ಸಮಯದ ಸ್ಲಾಟ್ ಅನ್ನು ನಿಗದಿಪಡಿಸಲಾಗುತ್ತದೆ. ಅವರು ನಿಗದಿತ ಸಮಯದ 1 ಗಂಟೆಯೊಳಗೆ ಸರತಿ ಸಾಲನಲ್ಲಿ ಸೇರಬಹುದು ಮತ್ತು ಮಂದಿನ 60 ನಿಮಿಷಗಳಲ್ಲಿ ದರ್ಶನ ಪಡೆಯುತ್ತಾರೆ ಎಂದರು.

ಈ ವಿನೂತನ ವ್ಯವಸ್ಥೆಯನ್ನು ಪ್ರಸ್ತುತ ಬೆಂಗಳೂರು ಕಂಪನಿಯು ಡೆಮೋ ಮಾಡುತ್ತಿದೆ. ಉದಾಯ ದಾನಿಗಳು ಪ್ರಾಯೋಜಿಸುತ್ತಿದ್ದಾರೆ ಎಂದು ನುಡಿದರು.

 

RELATED ARTICLES

Related Articles

TRENDING ARTICLES