Thursday, January 23, 2025

ಪಾಠ ಮಾಡಿ ತರಗತಿಯಿಂದ ಹೊರಬಂದ ಶಿಕ್ಷಕ ಹೃದಯಾಘಾತದಿಂದ ಸಾ*ವು !

ದಾವಣಗೆರೆ : ಕರ್ತವ್ಯದಲ್ಲಿದ್ದಾಗಲೆ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದ್ದು. ವಿಜ್ಞಾನ ಶಿಕ್ಷಕ ಕೆ.ನಾಗರಾಜ್ ಕರಿಗೌಡ(48) ಎಂಬುವವರು ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :

ದಾವಣಗೆರೆ ಜಿಲ್ಲೆಯ ಮಾಯಕೊಂಡದ ಕರ್ನಾಟಕ ಪಬ್ಲಿಕ್​ ಶಾಲೆಯಲ್ಲಿ ಘಟನೆ ನಡೆದಿದ್ದು. ಮಕ್ಕಳಿಗೆ ಪಾಠ ಮಾಡಿ ತರಗತಿಯಿಂದ ಹೊರಗೆ ಬರುತ್ತಿದ್ದಂತೆ ಶಿಕ್ಷಕ ನಾಗರಾಜ್​ಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೆ ಎಚ್ಚೆತ್ತ ಸಹದ್ಯೋಗಿಗಳು ಶಿಕ್ಷಕನನ್ನು ಸಮೀಪದ ಪ್ರಾಥಮಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಮಾಡುವಾಗಲೆ ಶಿಕ್ಷಕ ನಾಗರಾಜ್​ ಮೃತಪಟ್ಟಿದ್ದಾರೆ. ಶಿಕ್ಷಕನ ಸಾವಿಗೆ ಶಾಲಾ ಶಿಕ್ಷಕರು ಮತ್ತು ವಿಧ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES