Wednesday, December 18, 2024

ಬಿಬಿಎಂಪಿ ನಿರ್ಲಕ್ಷ : ಮರದ ಕೊಂಬೆ ಮುರಿದು ಬಿದ್ದು 9 ವರ್ಷದ ಬಾಲಕ ಐಸಿಯು ಪಾಲು !

ಬೆಂಗಳೂರು : ನಗರದಲ್ಲಿ ಬಿಬಿಎಂಪಿ ನಿರ್ಲಕ್ಷಕ್ಕೆ ಬಾಲಕನೊಬ್ಬ ಐಸಿಯುಗೆ ದಾಖಲಾದ ಘಟನೆ ನಡೆದಿದ್ದು. ಬೈಕ್​ನಲ್ಲಿ ತಂದೆಯೊಂದಿಗೆ ಹೋಗುತಿದ್ದ ವೇಳೆ ಮರದ ಕೊಂಬೆ ಮುರಿದು ಬಿದ್ದು 9 ವರ್ಷದ ಬಾಲಕ ಜಾಡೇಂ ಲೂಕಸ್​ ತಲೆಗೆ ತೀವ್ರ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ.

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಒಂದಿಲ್ಲೊಂದು ಅವಾಂತರವಾಗುತ್ತಿರುತ್ತವೆ. ಅದೇ ರೀತಿಯಾಗಿ ಬೆಂಗಳೂರಿನ ನಂದಿದುರ್ಗ ರಸ್ತೆಯಲ್ಲಿ ಒಂದು ಅವಘಡವಾಗಿದ್ದು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಬಾಲಕ ತನ್ನ ತಂದೆಯೊಂದಿಗೆ ಬೈಕ್​ನಲ್ಲಿ ಹೋಗುವಾಗ ಮಾವಿನ ಮರದ ಕೊಂಬೆ ಮುರಿದು ಬಿದ್ದಿದೆ.

ಮರದ ಕೊಂಬೆ ಬಿದ್ದ ರಭಸಕ್ಕೆ ಬಾಲಕನ ತಲೆಗೆ ತೀವ್ರ ಗಾಯವಾಗಿದ್ದು. ಸದ್ಯ ಬಾಲಕನನ್ನು ಖಾಸಗಿ ಆಸ್ಪತ್ರೆಯೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.  ಆಸ್ಪತ್ರೆಗೆ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಾಣಾದಿಕಾರಿ ಜಿ.ಎಲ್​.ಜಿ ಸ್ವಾಮಿ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES