ಬೆಳಗಾವಿ : ಜಿಲ್ಲೆಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದ್ದು. ಬಿಜೆಪಿಯ ಬಂಡಾಯ ನಾಯಕ ಬಸನಗೌಡಪಾಟೀಲ್ ಯತ್ನಾಳ ಮತ್ತು ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಪರಸ್ಪರ ಕೈಮುಗಿದು ಕುಶಲೋಪಚಾರ ವಿಚಾರಿಸಿಕೊಂಡಿದ್ದಾರೆ.
ಕಳೆದ ಕೆಲವು ತಿಂಗಳಿಂದ ಬಿಜೆಪಿಯ ಒಳಜಗಳ ಬೀದಿಗೆ ಬಂದಿದ್ದು. ಯತ್ನಾಳ್ ಮತ್ತು ಬಣ ವಿಜಯೇಂದ್ರರನ್ನು ರಾಜ್ಯಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪಟ್ಟು ಹಿಡಿದು ರೆಬಲ್ಸ್ ನಾಯಕರಾಗಿ ಗುರುತಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ವಿಜಯೇಂದ್ರ ಬಣದ ನಾಯಕರು ಕೂಡ ಯತ್ನಾಳ್ ವಿರುದ್ದ ಹೇಳಿಕೆ ನೀಡುತ್ತಿದ್ದರು. ಈ ಒಳಜಗಳ ಹೈಕಮಾಂಡ್ ಅಂಗಳನ್ನು ತಲುಪಿ ಯತ್ನಾಳ್ಗೆ ನೋಟಿಸ್ ನೀಡುವ ಹಂತಕ್ಕೆ ತಲುಪಿತ್ತು.
ಆದರೆ ನೋಟಿಸ್ ಪಡೆದ ಯತ್ನಾಳ್ ದೆಹಲಿ ಭೇಟಿಯಾಗುತ್ತಿದ್ದಂತೆ ವಿಜಯೇಂದ್ರ ಅವರ ವಿರುದ್ದ ನೀಡುತ್ತಿದ್ದ ಹೇಳಿಕೆಗಳು ನಿಂತುಹೋಗಿದ್ದವು. ಆದರೆ ಇಂದು ಸದನದಲ್ಲಿ ಇಬ್ಬರು ನಾಯಕರು ಪರಸ್ಪರ ಕೈಮುಗಿದು ಕುಶಲೋಪಚಾರ ವಿಚಾರಿಸಿಕೊಂಡಿರುವ ಪೋಟೋ ವೈರಲ್ ಆಗಿದ್ದು. ಬಿಜೆಪಿಯಲ್ಲಿನ ಭಿನ್ನಮತ ಶಮನವಾಗಿದೆಯೆ ಎಂಬ ಕುತೂಹಲ ಮೂಡಿಸುತ್ತಿದೆ.