ಮಧ್ಯಪ್ರದೇಶ : ಮದುವೆಯ ಮೊದಲ ರಾತ್ರಿಯೇ ಪತ್ನಿ ತನ್ನ ಪತಿಗೆ ಹಾಲಿನಲ್ಲಿ ಮತ್ತು ಭರಿಸುವ ಔಷಧ ಹಾಕಿ ನೀಡಿ ಮನೆಯಲ್ಲಿದ್ದ 12 ಲಕ್ಷ ಮೌಲ್ಯದ ನಗದು, ಚಿನ್ನಭಾರಣ ದೋಚಿ ಪರಾರಿಯಾಗಿರುವ ಘಟನೆಯೊಂದು ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಬೆಳಕಿಗೆ ಬಂದಿದೆ. ಇದೀಗ ಮದುವೆಗಾಗಿ ಸಾಲಸೋಲ ಮಾಡಿ ಮಾಡಿಟ್ಟ ಚಿನ್ನಾಭರಣ ಮತ್ತು ಲಕ್ಷಾಂತರ ಹಣವನ್ನು ಒಂದೇ ರಾತ್ರಿಯಲ್ಲಿ ಮದುಮಗಳು ದೋಚಿದ್ದು ವರನ ಮನೆಯವರನ್ನು ದಿಗ್ರಮೆಗೊಳಿಸಿದೆ.
‘ಮಧ್ಯಪ್ರದೇಶದ ಛತ್ತರ್‌ಪುರದ ಕುಲವಾರ ಗ್ರಾಮದ ರಾಜ್‌ದೀಪ್ ರಾವತ್ ಅವರ ವಿವಾಹವು ಚರಖಾರಿ ಗ್ರಾಮದ ಖುಷಿ ತಿವಾರಿ ಅವರೊಂದಿಗೆ ಡಿಸೆಂಬರ್ 12 ರಂದು ಧನುಷ್ಠಾರಿ ದೇವಸ್ಥಾನದಲ್ಲಿ ವಿಧಿವತ್ತಾಗಿ ನೆರವೇರಿತು. ಎರಡೂ ಕಡೆಯ ಕುಟುಂಬ ಸದಸ್ಯರು ಮದುವೆಯ ಸಂಭ್ರಮದಲ್ಲಿ ಖುಷಿ ಖುಷಿಯಾಗಿ ಭಾಗಿಯಾಗಿದ್ದರು ಅಂತೂ ದೇವಸ್ಥಾನದಲ್ಲಿ ಮದುವೆ ಕಾರ್ಯಗಳು ಒಳ್ಳೆ ರೀತಿಯಲ್ಲಿ ನಡೆದಿತ್ತು ಕೊನೆಗೆ ಹೆಣ್ಣಿನ ಕಡೆಯವರು ತನ್ನ ಮಗಳನ್ನು ಅಳಿಯನ ಕೈಗೆ ಕೊಟ್ಟು ಸಂತೋಷವಾಗಿ ಬಾಳಿ ಎಂದು ಆಶೀರ್ವದಿಸಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಇತ್ತ ಮದುವೆ ಮೊದಲ ರಾತ್ರಿ ಮದುಮಗಳು ತನ್ನ ಪತಿಗೆ ಕುಡಿಯಲು ಹಾಲು ನೀಡಿದ್ದಾಳೆ ಪತಿಯು ಖುಷಿಯಲ್ಲೇ ಕುಡಿದಿದ್ದಾನೆ ಇಷ್ಟಾದ ಕೆಲವೇ ಹೊತ್ತಿನಲ್ಲಿ ಪತಿ ನಿದ್ರೆಗೆ ಜಾರಿದ್ದಾನೆ ಅಷ್ಟೋತ್ತಿಗಾಗಲೇ ಮಧ್ಯರಾತ್ರಿಯಾಗಿತ್ತು, ಕೂಡಲೇ ವದು ಮದುಮಗನ ಮನೆಯಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಒಟ್ಟುಮಾಡಿ ರಾತ್ರೋರಾತ್ರಿ ಮನೆಯಿಂದ ಓಡಿ ಹೋಗಿದ್ದಾಳೆ. ಇತ್ತ ಬೆಳಿಗ್ಗೆ ವರನ ತಾಯಿ ಕೋಣೆಗೆ ಬಂದು ಎಬ್ಬಿಸಲು ಬಂದಾಗ ಕೊಣೆಯ ಬಾಗಿಲು ತೆರೆದಿತ್ತು ಕೊಣೆಯ ಒಳಗೆ ಹೋಗಿ ನೋಡಿದಾಗ ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ ಕೂಡಲೇ ತಾಯಿ ಮನೆಯಲ್ಲಿದ್ದ ಇತರ ಸದಸ್ಯರನ್ನು ಕರೆದು ಮದುಮಗಳನ್ನು ಹುಡುಕಿದಾಗ ಮದುಮಗಳು ಓಡಿ ಹೋಗಿರುವುದು ಬೆಳಕಿಗೆ ಬಂದಿದೆ.
ಯುವಕ ತಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆಕೆಯನ್ನು ಹುಡುಕಿ ತಮ್ಮ ಹಣವನ್ನು ತಮಗೆ ವಾಪಾಸ್ ನೀಡಿ ಎಂದು ಪೊಲೀಸರ ಬಳಿ ಅಂಗಲಾಚಿದ್ದಾರೆ.