Wednesday, January 22, 2025

ವಾಹನ ಮಾಲೀಕರಿಗೆ ಬಿಗ್ ರಿಲೀಫ್ : HSRP ನಂಬರ್​ ಪ್ಲೇಟ್​ ಅಳವಡಿಸದವರ ಮೇಲೆ ಕ್ರಮ ಕೈಗೊಳ್ಳಬೇಡಿ !

ಬೆಂಗಳೂರು : ರಾಜ್ಯದ ವಾಹನ ಸವಾರರಿಗೆ ಹೈಕೋರ್ಟ್​ ಬಿಗ್ ರಿಲೀಫ್​ ನೀಡಿದ್ದು. HSRP ನಂಬರ್​ ಪ್ಲೇಟ್​ ಅಳವಡಿಸದವರ ಮೇಲೆ ಕ್ರಮ ಕೈಗೊಳ್ಳಬೇಡಿ ಎಂದು ರಾಜ್ಯ ಸಾರಿಗೆ ಇಲಾಖೆಗೆ ಆದೇಶ ನೀಡಿದೆ ಎಂದು ತಿಳಿದು ಬಂದಿದೆ.

HSRP ( ಹೈ ಸೆಕ್ಯೂರಿಟಿ ನಂಬರ್​ ಪ್ಲೇಟ್​​) ಅಳವಡಿಸಿಕೊಳ್ಳಲು ಸಾರಿಗೆ ಇಲಾಖೆ ಡಿಸೆಂಬರ್​ 31ರವರೆಗೆ ಗಡುವು ವಿಧಿಸಿತ್ತು ಮತ್ತು ಈ ಡೆಡ್​ಲೈನ್​ ಮುಗಿದ ನಂತರ ನ್ಯಾಯಾಲಯ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೆ ಇಂದು ಹೈಕೋರ್ಟ್​ ಆದೇಶ ಹೊರಡಿಸಿದ್ದು. HSRP ನಂವರ್​ ಪ್ಲೇಟ್​​ ಅಳವಡಿಸಿದ ವಾಹನ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಡಿ ಎಂದು ಮಾಹಿತಿ ದೊರೆತಿದೆ.

ವಾಹನ ಸವಾರರಿಗೆ ಅರಿವು ಮೂಡಿಸಿ !

ಈಗಾಗಲೇ HSRP ನಂಬರ್​ ಪ್ಲೇಟ್​ ಅಳವಡಿಸಿಕೊಳ್ಳಲು ಸುಮಾರು 5 ಬಾರಿ ಗಡುವನ್ನು ವಿಸ್ತರಿಸಿದ್ದು. ಕಳೆದ ಒಂದುವರೆ ವರ್ಷದಲ್ಲಿ 56 ಲಕ್ಷದ 40 ಸಾವಿರ ವಾಹನಗಳು HSRP ನಂಬರ್​ ಪ್ಲೇಟ್​ ಅಳವಡಿಸಿಕೊಂಡಿದೆ ಎಂದು ಮಾಹಿತಿ ದೊರೆತಿದೆ. ಆದರೆ ಇನ್ನು ಸುಮಾರು 1 ಕೋಟಿ 44ಲಕ್ಷ ವಾಹನಗಳು HSRP ನಂಬರ್​ ಪ್ಲೇಟ್​ ಅಳವಡಿಸಿಕೊಳ್ಳವುದು ಬಾಕಿ ಇದೆ.

ಹೆಚ್ಚಿನ ವಾಹನ ಸವಾರರು HSRP ನಂಬರ್ ಪ್ಲೇಟ್​ ಅಳವಡಿಸಿಕೊಳ್ಳಲು ನಿರಾಸಕ್ತಿ ತೋರುತ್ತಿದ್ದು. ಇದಕ್ಕೆ ಅರಿವನ್ನು ಮೂಡಿಸಲು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಶಿಬಿರಗಳನ್ನು ಆಯೋಜನೆ ಸವಾರರಿಗೆ ಅರಿವನ್ನು ಮೂಡಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

RELATED ARTICLES

Related Articles

TRENDING ARTICLES