ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಪಡೆದಿರುವ ಪವಿತ್ರಾ ಗೌಡಳ ಮಾಜಿ ಗಂಡ ಸಂಜಯ್ ಸಿಂಗ್ ಪವರ್ ಟಿ.ವಿ ಯೊಂದಿಗೆ ಎಕ್ಷ್ಕ್ಲೂಸಿವ್ ಆಗಿ ಮಾತನಾಡಿದ್ದು. ಮೊದಲೆರಡು ಭಾಗದಲ್ಲಿ ಪವಿತ್ರಾಳೊಂದಿಗಿನ ಪ್ರೀತಿ, ಮದುವೆ ಮತ್ತು ಅದು ಡಿವೋರ್ಸ್ ಅಂತ ತಲುಪಿದ್ದು ಯಾಕೆ ಎಂಬುದನ್ನು ವಿವರಿಸಿದ್ದರು. ಈ ಭಾಗದಲ್ಲಿ
ಇದನ್ನೂ ಓದಿ :ಜೀವನ ತುಂಬಾ ಚನ್ನಾಗಿತ್ತು : ಮೊದಲು ನಾಯಿ ವಿಚಾರಕ್ಕೆ ಜಗಳವಾಗಿ, ಡಿವೋರ್ಸ್ ಹಂತಕ್ಕೆ ತಲುಪಿತು ! ಭಾಗ-02
ಪವಿತ್ರಾಳನ್ನು ತುಂಬಾ ಕೇರ್ ಮಾಡುತ್ತಿದ್ದೆ !
ಮದುವೆಯಾಗಿ ಮಗುವಾದ ನಂತರ ಪವಿತ್ರ ಮತ್ತು ಸಂಜಯ್ ಸಿಂಗ್ ಮಧ್ಯೆ ಜಗಳ ಆರಂಭವಾಗಿತ್ತು. ಆದರೂ ಕೂಡ ಸಂಜಯ್ ಪವಿತ್ರಾಳನ್ನು ತುಂಭಾ ಕೇರ್ ಮಾಡುತ್ತಿದ್ದರು. ಆಕೆಗೆ ಏನು ಇಷ್ಟವೋ ಅದನ್ನು ಫುಲ್ಫಿಲ್ ಮಾಡುತ್ತಿದ್ದರು. ಆದರೆ ಪವಿತ್ರಾಳೊಂದಿಗೆ ಜಗಳ ತಾರಕ್ಕಕ್ಕೆ ಏರಿ ಡಿವೋರ್ಸ್ ಹಂತಕ್ಕೆ ತಲುಪಿತ್ತು.
ಡಿವೋರ್ಸ್ ಕೊಡುವಾಗ ನಾನು ತುಂಬಾ ಅಳುತ್ತಿದ್ದೆ !
ಮನೆಯ ಜಗಳ ಹೆಚ್ಚಾಗಿ ಡಿವೋರ್ಸ್ಗಾಗಿ ಕೋರ್ಟ್ಗೆ ಬಂದ ಪವಿತ್ರ, ಸಂಜಯ್ ಕೋರ್ಟ್ನಲ್ಲಿ ವಿಚ್ಚೇದನಕ್ಕಾಗಿ ನ್ಯಾಧೀಶರ ಮುಂದೆ ನಿಂತುಕೊಂಡರು. ಆದರೆ ಪವಿತ್ರಾಳನ್ನು ತ್ಯಜಿಸಲು ಇಷ್ಟವಿಲ್ಲದ ಸಂಜಯ್ ಕೋರ್ಟ್ ಬಾತ್ರೂಂನಲ್ಲಿ ತುಂಬಾನೆ ಅಳುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ಕೋರ್ಟ್ನಲ್ಲಿ ಅಳುತ್ತಲೆ ಡಿವೊರ್ಸ್ ಕೊಟ್ಟ ಸಂಜಯ್ ಡಿವೋರ್ಸ್ ಪೇಪರ್ಗಳಿಗು ಅಳುತ್ತಲೆ ಸಹಿ ಮಾಡಿದರು. ಎಲ್ಲವು ಚನ್ನಾಗಿದ್ದ ಸಂಸಾರ ಬಿರುಕು ಮೂಡಿದ ಎರಡೇ ವರ್ಷಗಳಲ್ಲಿ ಬಿದ್ದು ನಾಶವಾಗಿ ಹೋಗಿತ್ತು. 9 ತಿಂಗಳ ಕಾಲ ದೂರವಿದ್ದ ಸಂದರ್ಭದಲ್ಲಿಯು ಕೂಡ ಒಮ್ಮೆಯು ಮಾತನಾಡದ ಇವರನ್ನು ಒಂದು ಮಾಡಲು ಪವಿತ್ರ ಗೌಡ ಮನೆಯವರು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ನಮ್ಮಿಬ್ಬರ ಮಧ್ಯೆ ಒಂದಾಣಿಕೆ ಆಗಲೆ ಇಲ್ಲ ಎಂದು ಹೇಳಿದರು.
ಡಿವೋರ್ಸ್ ಕೊಡಬೇಡ ಯೋಚನೆ ಮಾಡು ಎಂದು ನಮ್ಮಪ್ಪ ಹೇಳಿದ್ದರು !
ನಾವಿಬ್ಬರು ಡಿವೋರ್ಸ್ಗಾಗಿ ಕೊರ್ಟ್ಗೆ ಹೋಗಿದ್ದಾಗ ನಮ್ಮ ತಂದೆಯು ಕೂಡ ಬಂದಿದ್ದರು ಎಂದ ಸಂಜಯ್ ಸಿಂಗ್, ನಮ್ಮಪ್ಪ ನಮ್ಮ ಮದುವೆಗೂ ಕೂಡ ಬಂದಿರಲಿಲ್ಲ ಆದರೆ ನಾನು ಡಿವೋರ್ಸ್ ಕೊಡುವಾಗ ಬಂದಿದ್ದರು. ಕೊನೆ ಘಳಿಗೆ ಮಗ ಯೋಚನೆ ಮಾಡು ಡಿವೋರ್ಸ್ ಕೊಡಬೇಡ ಎಂದು ಸಾರಿ, ಸಾರಿ ಹೇಳಿದರು. ಆದರೆ ವಿಧಿ ಇಲ್ಲದೆ ನಾನು ಡಿವೋಸ್ ನೀಡಬೇಕಾಯಿತು. ಆದರೆ ನಮ್ಮ ತಂದೆ ಇದರಿಂದಾಗಿ ತುಂಬಾ ಬೇಸರ ಮಾಡಿಕೊಂಡಿದ್ದರು.
ಡಿವೋರ್ಸ್ ನೀಡಿದ ದಿನ ನಾನು ಕಣ್ಣೀರಾಕುತ್ತಾ ನ್ಯಾಯಲಯದಿಂದ ಹೊರಗೆ ಬಂದೆ, ಆಗ ನನ್ನನ್ನು ಪವಿತ್ರ ಗೌಡ ಕಾರಿನಲ್ಲಿ ಕುಳಿತುಕೊಂಡು ಕರೆದಳು, ಆದರೆ ನಾನೇ ಹೋಗಲಿಲ್ಲಾ. ಅಷ್ಟು ಹೊತ್ತಿಗೆ ನನ್ನ ಹೃದಯ ಒಡೆದು ಚೂರುಚೂರಾಗಿತ್ತು ಎಂದು ಹೇಳಿದರು.
ನನಗೆ ಎರಡನೇ ಮದುವೇ ಆಗು ಎಂದು ತುಂಬಾ ಒತ್ತಾಯ ಮಾಡಿದ್ದರು !
ಪವಿತ್ರಾ ಜೀವನದಲ್ಲಿ ಹೆಸರು ಮಾಡಬೇಕು ಎಂದು ತುಂಬಾ ಯೋಚನೆ ಮಾಡುತ್ತಿದ್ದಳು. ತನ್ನ ಕೆರಿಯರ್ ಬಗ್ಗೆ ತುಂಬಾ ಥಿಂಕ್ ಮಾಡುತ್ತಿದ್ದಳು. ಪವಿತ್ರಾಗೆ ನಾನು ಡಿವೋರ್ಸ ಮಾಡಿದ ನಂತರ 2ನೇ ಮದುವೆಯಾಗು ಎಂದು ತುಂಬಾ ಒತ್ತಾಯ ಮಾಡಿದರು. ಆದ್ರೆ ನಾನು ಆಗಲ್ಲ ಎಂದು ಹೇಳಿದೆ.
ನನಗೆ ಮಗಳು ಎಂದರೆ ಪ್ರಾಣ, ಈಗ ನನ್ನ ಟೈಮ್ ಕಟ್ಟಿದೆ ಆದರೆ ಮುಂದೆ ಒಂದು ದಿನ ಸಮಯ ಬದಲಾಗುತ್ತದೆ. ನಾನು ಪವಿತ್ರಾಗೆ ಡಿವೋರ್ಸ್ ಕೊಡುವಾಗ ನನ್ನ ಮಗಳು ಇನ್ನು ಚಿಕ್ಕ ಪಾಪು, ಆಟವಾಡಿಕೊಂಡಿದ್ದಳು. ಹೆಣ್ಣು ಮಗುವಾಗಿದ್ದಕ್ಕೆ ಪವಿತ್ರಾ ಕರೆದುಕೊಂಡು ಹೋದಳು, ಗಂಡು ಮಗುವೇನಾದರು ಆಗಿದ್ದರೆ ನಾನು ಕರೆದುಕೊಂಡು ಹೋಗುತ್ತಿದ್ದೆ.
ನನ್ನ ಮಗಳ ಜೊತೆ ಈಗಲೂ ನಾನು ಪೋನ್ನಲ್ಲಿ ಮಾತನಾಡುತ್ತೇನೆ. ಒಂದೆರಡು ಬಾರಿ ಬೇಟಿಯಾಗಿದ್ದೇನೆ. ನಮ್ಮಿಬ್ಬರ ನಡುವೆ ಡಿವೋರ್ಸ್ ಆಗಿ ಸುಮಾರು 11 ವರ್ಷಗಳಾಗಿದೆ. ಈ ಅವದಿಯಲ್ಲಿ ನಾನು 2 ಬಾರಿ ನನ್ನ ಮಗಳನ್ನು ಭೇಟಿಯಾಗಿದ್ದೇನೆ ಎಂದು ಹೇಳಿದರು.