ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಪಡೆದಿರುವ ಪವಿತ್ರಾ ಗೌಡಳ ಮಾಜಿ ಗಂಡ ಸಂಜಯ್ ಸಿಂಗ್ ಪವರ್ ಟಿ.ವಿ ಯೊಂದಿಗೆ ಎಕ್ಷ್ಕ್ಲೂಸಿವ್ ಆಗಿ ಮಾತನಾಡಿದ್ದು. ರೇಣುಕಾಸ್ವಾಮಿ ಕೊಲೆ ವಿಚಾರದಲ್ಲಿ ಮಾತನಾಡಿದ ಸಂಜಯ್ ಸಿಂಗ್ ‘ ಪವಿತ್ರ ಕೊಲೆ ಮಾಡುವಷ್ಟು ಕೆಟ್ಟವಳಲ್ಲ ಎಂದು ಹೇಳಿದರು.
ಪವಿತ್ರ ಬಂಧನದ ವಿಚಾರ ತಿಳಿದು ತುಂಬಾ ಆಘಾತವಾಯಿತು !
ರೇಣುಕಾಸ್ವಾಮಿ ಕೊಲೆ ವಿಚಾರದಲ್ಲಿ ಪವಿತ್ರಾ ಬಂಧನ ವಿಚಾರವಾಗಿ ಮಾತನಾಡಿದ ಸಂಜಯ್ ಸಿಂಗ್ ‘ ಈ ವಿಚಾರವನ್ನು ಕೇಳುತ್ತಿದ್ದಂತೆ ನನಗ ತುಂಬಾ ಆಘಾತವಾಯಿತು, ಆಕೆ ಮನಿ ಮೈಂಡೆಡ್ ಎಂಬುದು ನನಗೆ ಗೊತ್ತಿತ್ತು. ಆದರೆ ಕೊಲೆ ಮಾಡುವಂತವಳಲ್ಲ. ಆದರೆ ನನಗೆ ದರ್ಶನ್ ಬಗ್ಗೆ ಗೊತ್ತಿಲ್ಲ, ಅವರಿಬ್ಬರ ಪರಿಚಯದ ಬಗ್ಗೆಯೂ ಗೊತ್ತಿಲ್ಲ. ಆಕೆಯ ವೈಯಕ್ತಿಕ ಜೀವನದಲ್ಲಿ ನಾನು ಮಧ್ಯಪ್ರವೇಶಿಸಿಲ್ಲ, ಆಕೆಗೆ ಎನೂ ಸಂತೋಷ ನೀಡುತ್ತದೊ ಅದನ್ನ ಮಾಡಲಿ ಆಕೆಯ ವೈಯಕ್ತಿಕ ಜೀವನದಲ್ಲಿ ನಾನು ಪ್ರವೇಶಿಸಿಲ್ಲ. ಆಕೆಯ ಹಾದಿಗೆ ನಾನು ಮುಳ್ಳಾಗಲು ಇಷ್ಟ ಪಡಲ್ಲ ಎಂದು ಹೇಳಿದರು.
ಇದನ್ನೂ ಓದಿ :
ನಾನು ದರ್ಶನ್ ಫ್ಯಾನ್ ಅಲ್ಲ, ಸುದೀಪ್ ಫ್ಯಾನ್ !
ದರ್ಶನ್ ಕುರಿತು ಮಾತನಾಡಿದ ಸಂಜಯ್ ಸಿಂಗ್ ‘ಕನ್ನಡ ಇಂಡಸ್ಟ್ರಿಯಲ್ಲಿ ದರ್ಶನ್ ಸೂಪರ್ ಸ್ಟಾರ್ ಎಂದು ಗೊತ್ತಿತ್ತು, ಒಂದು ಕಾಲದಲ್ಲಿ ನಾನು ದರ್ಶನ್ ಅವರ ಬಿಗ್ ಫ್ಯಾನ್ ಆಗಿದ್ದೆ, ಆ ಮೇಲೆ ಸುದೀಪ್ ಅವರ ‘ಏನಾಗಲಿ ಮುಂದೆ ಸಾಗಲಿ’ ಹಾಡು ಕೇಳಿದೆ, ಆ ಬಳಿಕ ನಾನು ಸುದೀಪ್ ಅವರ ಬಿಗ್ ಫ್ಯಾನ್ ಆಗಿಬಿಟ್ಟೆ ಎಂದು ಹೇಳಿದರು.
ಆದರ ಇಂದು ಕೂಡ ನಾನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಳಾ ಪಾತ್ರ ಇದೆ ಎಂದರೆ ನಾನು ನಂಬಲ್ಲ, ಆಕೆ ಕೊಲೆ ಮಾಡುವಂತ ಹುಡಿಗಿ ಅಲ್ಲ, ಕೆಟ್ಟ ಟೈಮ್ಲ್ಲಿ ಕೊಲೆ ಕೇಸ್ನಲ್ಲಿ ಭಾಗಿಯಾಗಿದ್ದಾಳೆ ಎಂದು ಹೇಳಿದರು.
ರೇಣುಕಾಸ್ವಾಮಿ ಮಾಡಿದ್ದು ಕೂಡ ತಪ್ಪಲ್ವಾ !
ಕೊಲೆಯಾದ ವ್ಯಕ್ತಿ ರೇಣುಕಾಸ್ವಾಮಿಗೆ ಮದ್ವೆ ಆಗಿತ್ತಲ್ವಾ ? ಆತನಿಗೂ ಮಗು ಇದೆ ಅಲ್ವಾ..? ಆತ ಹಾಗೆ ಮೆಸೇಜ್ ಕಳಿಸಬಹುದಾ? ಸ್ವಂತ ಹೆಂಡತಿಯನ್ನು ಬಿಟ್ಟಿರುವ ನನಗೆ ಕಷ್ಟ ಇಲ್ಲ ಅಂದ್ಮೇಲೆ. ಆತ ಯಾಕೆ ಮಧ್ಯಪ್ರವೇಶ ಮಾಡಬೇಕಿತ್ತು, ಅವ್ನ ಜೀವನ ನೋಡ್ಕೋಬೇಕಿತ್ತು ,ಕೊಲೆಯಾದ ರೇಣುಕಾಸ್ವಾಮಿ ನಟ ದರ್ಶನ್ ಫ್ಯಾನೇ ಇರಬಹುದು. ಆದರೆ ಅವರು ಈಗ ತೀರಿಹೋಗಿದ್ದಾರೆ ಇದರ ಬಗ್ಗೆ ಮಾತನಾಡುವುದಿಲ್ಲ,
ಪವಿತ್ರಾಗೆ ಅಂದು ರೇಣುಕಾಸ್ವಾಮಿಯಿಂದ ಕಷ್ಟ ಬಂತು ಅದಕ್ಕೆ ದರ್ಶನ್ ಬಳಿ ಹೋಗಿದ್ದಾರೆ. ಯಾರೂ ಕೂಡ ಈ ರೀತಿಯಾದಾಗ ಪೊಲೀಸ್ ಠಾಣೆಗೆ ಹೋಗಲ್ಲ. ಅದೇ ರೀತಿ ಪವಿತ್ರ ದರ್ಶನ್ ಬಳಿಗೆ ಹೋಗಿದ್ದಾರೆ. ಆದರೆ ದರ್ಶನ್ ಅವರೆ ಒಂದು ಸ್ಟೆಪ್ಸ್ ತೆಗೆದುಕೊಂಡು ಘಟನೆ ಆಗಿರಬೇಕು.
ಅದರೆ ನಾನು ನೋಡಿದಂತೆ ಪವಿತ್ರಾಗೌಡಗೆ ತುಂಬಾ ತಾಳ್ಮೆ ಇದೆ, ಆದರೆ ತಾಳ್ಮೆಗೂ ಒಂದು ಮಿತಿ ಇರುತ್ತೆ ಅಲ್ವಾ, ಆಕೆ ರೇಣುಕಾಸ್ವಾಮಿ ಮೆಸೇಜ್ ಬ್ಲಾಕ್ ಮಾಡಿರ್ತಾಳೆ, ಆ ಬಳಿಕ ಆಕೆ ದರ್ಶನ್ ಹತ್ತಿರ ಹೋಗಿ ಹೇಳಿರಬಹುದು, ಆ ಮೇಲೆ ಸಿಟ್ಟಿನಲ್ಲಿ ಈ ಘಟನೆ ನಡೆದಿರಬಹುದು. ನಾನು ಬಾತ್ರೂಮ್ನಲ್ಲಿ ಕುಳಿತು ಸಿಟ್ಟು ವ್ಯಕ್ತಪಡಿಸುತ್ತೇನೆ, ಆದ್ರೆ, ಹೊರಗೆ ಬಂದ್ರೆ, ನಾನು ಅದ್ಯಾವುದನ್ನು ಮಾತಾಡಲ್ಲ’ ಪವಿತ್ರಾಗೌಡ ಬಗ್ಗೆ ನನಗೆ ಈಗಲೂ ತುಂಬಾನೇ ಪ್ರೀತಿ ಇದೆ ಎಂದು ಹೇಳಿದರು.
ಮುಕ್ತಾಯಾ…………………..