Wednesday, January 22, 2025

ಜೀವನ ತುಂಬಾ ಚನ್ನಾಗಿತ್ತು : ಮೊದಲು ನಾಯಿ ವಿಚಾರಕ್ಕೆ ಜಗಳವಾಗಿ, ಡಿವೋರ್ಸ್​ ಹಂತಕ್ಕೆ ತಲುಪಿತು ! ಭಾಗ-02

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಪಡೆದಿರುವ ಪವಿತ್ರಾ ಗೌಡಳ ಮಾಜಿ ಗಂಡ ಸಂಜಯ್​ ಸಿಂಗ್​ ಪವರ್​ ಟಿ.ವಿ ಯೊಂದಿಗೆ ಎಕ್ಷ್​ಕ್ಲೂಸಿವ್​ ಆಗಿ ಮಾತನಾಡಿದ್ದು. ಮೊದಲ ಭಾಗದಲ್ಲಿ ಅವರಿಬ್ಬರ ನಡುವೆ ಪ್ರೇಮಾಂಕುರವಾದ ಬಗ್ಗೆ ವಿವರಿಸಿದ್ದರು. ಆದರೆ ಖುಶಿಯಾಗಿ, ಸುಖ ಸಾಗರದಲ್ಲಿ  ನಡೆಯುತ್ತಿದ್ದ ಅವರ ಜೀವನದಲ್ಲಿ ಬಿರುಗಾಳಿ ಎದ್ದಿದ್ದು ಯಾವಾಗ ….!

ಇದನ್ನೂ ಓದಿ :ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ನನ್ನ ಜೊತೆ ಪವಿತ್ರ ಪ್ರೀತಿಯಲ್ಲಿ ಬಿದ್ದಿದ್ದಳು ! ಭಾಗ- 01

ಸಿನಿಮಾ ರಂಗದತ್ತ ವಾಲಿದ ನಂತರ ನಮ್ಮಿಬ್ಬರ ನಡುವೆ ಜಗಳ ಶುರುವಾಯಿತು !

ಮನೆಯವರ ಕಲಹ, ಜಗಳದ ನಂತರ 2007ರಲ್ಲಿ ಮದುವೆಯಾದ ಸಂಜಯ್​ ಸಿಂಗ್​ ಮತ್ತು ಪವಿತ್ರಾರಿಗೆ ಪ್ರೀತಿಯ ಸಂಕೇತವಾಗಿ 2009ರಲ್ಲಿ ಮಗಳು ಜನಿಸಿದಳು. ಆಕೆಗೆ ಖುಶಿ ಎಂದು ಹೆಸರಿಟ್ಟರು. ಈ ರೀತಿಯಾಗಿ ನೆಮ್ಮದಿ ಜೀವನ ನಡೆಸುತ್ತಿದ್ದ ಇವರ ಜೀವನದಲ್ಲಿ ತಿರುವು ಬಂದಿದ್ದು. ಪವಿತ್ರ ಇನ್ನೋವಾ ಫಿಲ್ಮ್ ಸಿಟಿಯಲ್ಲಿ ಕೋಳಿರಮ್ಯಾ ಎಂಬಾಕೆಯನ್ನು ಭೇಟಿ ಮಾಡಿದ ನಂತರ. ಕೋಳಿ ರಮ್ಯಾಳನ್ನು ಭೇಟಿ ಮಾಡಿದ ನಂತರ ಪವಿತ್ರಾ ಚಿತ್ರರಂಗದ ಕಡೆಗೆ ವಾಲಿದಳು. ಇದರ ನಂತರ ಇವರ ಜೀವನದಲ್ಲಿ ಜಗಳ ಎಂಬುದ ಶುರುವಾಗಿ ಡಿವೋರ್ಸ್​ ಹಂತ ತಲುಪಿತು.

ಮೊದಲಿಗೆ ನಾಯಿ ವಿಚಾರಕ್ಕೆ ಜಗಳವಾಗಿ ದೂರ ಆದ್ವಿ !

ಚಿತ್ರರಂಗದ ಕಡೆಗೆ ವಾಲಿದ ಪವಿತ್ರಾ ಶೂಟಿಂಗ್​ನಲ್ಲಿ ಸಖತ್​ ಬ್ಯುಸಿ ಆದಳು, ಇದಾದ ನಂತರ ಇವರಿಬ್ಬರ ಸಂಸಾರದಲ್ಲಿ ಕಲಹ ಎಂಬುದು ಶುರುವಾಯಿತು. ಮೊದಲಿಗೆ ಸಂಜಯ್​ ಸಿಂಗ್​ ಮನೆಗೆ ಒಂದು ನಾಯಿಯನ್ನು ತಂದಿದ್ದನು. ಇದರ ವಿಚಾರಕ್ಕೆ ನಮ್ಮಿಬ್ಬರ ನಡುವೆ ಜಗಳ ಆರಂಭವಾಯಿತು. ನಾಯಿಗೆ ಸ್ನಾನ ಮಾಡಿಸುವ ವಿಚಾರಕ್ಕೆ ಜಗಳವಾಗಿ ಇಬ್ಬರು ಪರಸ್ಪರ ಸುಮಾರು 9 ತಿಂಗಳ ಕಾಲ ದೂರವಿದ್ದರು. ಈ ಸಮಯದಲ್ಲಿ ಮಗುವನ್ನು ಅತ್ತೆಯ ಮನೆಯಲ್ಲಿ ಬಿಟ್ಟಿದ್ದೆವು. ಅಲ್ಲಿಂದ ನಮ್ಮ ಸಂಸಾರದಲ್ಲಿ ಬಿರುಕು ಮೂಡಿತು ಎಂದು ಸಂಜಯ್​ ಸಿಂಗ್ ಪವರ್ ಟಿವಿಗೆ ನೀಡಿದ ಎಕ್ಷ್​ಕ್ಲೂಸಿವ್​ ಸಂದರ್ಶನದಲ್ಲಿ ಹೇಳಿದರು.

ಮುಂದುವರಿಯುತ್ತದೆ………………….

RELATED ARTICLES

Related Articles

TRENDING ARTICLES