ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಪಡೆದಿರುವ ಪವಿತ್ರಾ ಗೌಡಳ ಮಾಜಿ ಗಂಡ ಸಂಜಯ್ ಸಿಂಗ್ ಪವರ್ ಟಿ.ವಿ ಯೊಂದಿಗೆ ಎಕ್ಷ್ಕ್ಲೂಸಿವ್ ಆಗಿ ಮಾತನಾಡಿದ್ದು. ಪವಿತ್ರಾಳೊಂದಿಗೆ ಹೇಗೆ ಪ್ರೀತಿ ಆರಂಭವಾಯಿತು, ಅವರ ಪೂರ್ವ ಜೀವನ ಹೇಗಿತ್ತು ಎಂಬ ಬಗ್ಗೆ ವಿವರಿಸಿದ್ದಾರೆ.
ಪವಿತ್ರಾಳೆ ಮೊದಲು ನನ್ನ ಪ್ರೀತಿಸುತ್ತಿದ್ದಳು !
ಪವರ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಸಂಜಯ್ ಸಿಂಗ್ ‘ ಬೆಂಗಳೂರಿನಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ನನ್ನ ಜೊತೆ ಪವಿತ್ರ ಪ್ರೀತಿಯಲ್ಲಿ ಬಿದ್ದಿದ್ದಳು. ನಾನು ಕೂಡ ಆಕೆಯನ್ನು ನೋಡುತ್ತಿದ್ದೆ. ನನಗೆ ಗೊತ್ತಿಲ್ಲದಂತೆ ಆಕೆಯೆ ನನ್ನ ನಂಬರ್ ಪಡೆದುಕೊಂಡಿದ್ದಳು. ಹೀಗೆ ಪವಿತ್ರಾಳೆ ಮೊದಲು ನನ್ನ ಮೇಲೆ ಆಕರ್ಷಣೆಗೆ ಒಳಗಾಗಿದ್ದಳು’ ಎಂಬ ಕುರಿತು ಹೇಳಿದರು.
ಪವಿತ್ರಾಳಾ ಅಣ್ಣನೊಂದಿಗೆ ಗಲಾಟೆ !
ಪವಿತ್ರಾಳೊಂದಿಗೆ ಪ್ರೀತಿ ಮಾಡಲು ಶುರುಮಾಡಿದ ನಂತರ ನಮ್ಮ ಮತ್ತು ಪವಿತ್ರಾಳ ಅಣ್ಣನ ನಡುವೆ ದೊಡ್ಡ ಗಲಾಟೆಯಾಯಿತು. ಅವರ ಅಣ್ಣ ಸುಮಾರು 40-50 ಜನರ ಜೊತೆ ಬಂದು ನನ್ ತಂಗಿಯ ಜೊತೆ ಲವ್ ಮಾಡ್ತೀಯ ಎಂದು ಜಗಳ ಮಾಡಿ ನನ್ನಗೆ ಹೊಡೆದರು. ಆದರೆ ಆ ಟೈಮ್ಲ್ಲಿ ನಮ್ಮ ಮಾವ ಪುಟ್ಟಣ ಗೌಡರು ನನಗೆ ಸಪೋರ್ಟ್ ಮಾಡಿದರು. ಅವರ ಧ್ವನಿ ಮಾತ್ರ ದೊಡ್ಡದು. ಆದರೆ ಅವರ ಮನಸ್ಸು ಒಳ್ಳೆಯದು’
ನಂತರ ನಮ್ಮ ಪ್ರೀತಿಯ ವಿಷಯವನ್ನು ನಮ್ಮ ಮನೆಯಲ್ಲಿ ತಿಳಿಸಿದೆ. ನಮ್ಮ ಮನೆಯಲ್ಲಿ ಯಾವುದೇ ಗಲಾಟೆ ಆಗಲಿಲ್ಲ. ನಾವು ರಜಪೂತ ಮನೆತನದವರು ನಮಗೆ ಪ್ರೀತಿ ಕೊಟ್ಟರೆ ಪ್ರೀತಿ, ರಕ್ತ ಕೊಟ್ಟರೆ ರಕ್ತ ಎಂಬ ನೀತಿ ಅನುಸರಿಸುವವರು. ಆದರೆ ನಮ್ಮ ಅತ್ತೆ- ಮಾವ ಒಳ್ಳೆಯವರು. ಗಲಾಟೆ ಆದಮೇಲೆ ಎಲ್ಲವು ಸೈಲೆಂಟ್ ಆಯಿತು. ಗಲಾಟೆಯಲ್ಲಿ ಪವಿತ್ರಾಲಿಗು ಏಟುಗಳು ಬಿದ್ದಿದ್ದವು ಎಂದು ಅವರು ತಮ್ಮ ಪ್ರೀತಿಯ ಆರಂಭದ ದಿನಗಳನ್ನು ನೆನಪಿಸಿಕೊಂಡರು.
ನಮ್ಮ ಮದುವೆ ಡಿ.ಕೆ ಶಿವಕುಮಾರ್ ಕೂಡ ಬಂದಿದ್ದರು !
ಗಲಾಟೆಯೆಲ್ಲ ಮುಗಿದ ನಂತರ ನಮ್ಮ ಪ್ರೀತಿ ಮುಂದುವರಿಯಿತು, ಆಗ ಪವಿತ್ರಾಲಿಗೂ ನನ್ನ ಮೇಲೆ ಸಾಕಷ್ಟು ಪ್ರೀತಿ ಇತ್ತು. ನಾನೂ ಕೂಡ ಪವಿತ್ರಾಳನ್ನು ಸಾಕಷ್ಟು ಪ್ರೀತಿಸುತ್ತಿದ್ದೆ. ನಮ್ಮಿಬ್ಬರ ಮದುವೆ ಸಾಕಷ್ಟು ಗ್ರ್ಯಾಂಡ್ ಆಗಿ ನಡೆಯಿತು. ಆ ಮದುವೆಗೆ ಡಿ,ಕೆ ಶಿವಕುಮಾರ್ ಕೂಡ ಬಂದಿದ್ದರು. ತುಂಬಾ ಅದ್ದೂರಿಯಾಗಿ ನಮ್ಮ ಮದುವೆಯಾಯಿತು. ಮದುವೆ ನಂತರ ನಮ್ಮಿಬ್ಬರ ಮೇಲೆ ಜವಬ್ದಾರಿಗಲೂ ಕೂಡ ಬಂದವು. ಎಲ್ಲರಂತೆ ನಾವು ಕೂಡ ಜವಬ್ದಾರಿಯಿಂದ ಜೀವನ ನಡೆಸುತ್ತಿದ್ದೊ ಎಂದು ಹೇಳಿದರು.
ಮುಂದುವರಿಯುತ್ತದೆ …………….