ಹಾವೇರಿ: ತಂದೆಯೊಬ್ಬ ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ನೀಡಿದ ಪ್ರಕರಣದಲ್ಲಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ತಂದೆಗೆ 27ಸಾವಿರ ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಜುಲೈ 30 2024 ರಂದು ರಾಣೆಬೇನ್ನೂರು ನಗರದ ಹಲಗೇರಿ ಕ್ರಾಸ್ ಬಳಿ ಬೈಕ್ ಅಪಘಾತವಾಗಿತ್ತು. ಈ ಅಪಘಾತದಲ್ಲಿ ಜಾಕಿರ್ ಜಮಾಲುದಿನ್ ಕಮದೋಡ ಎಂಬ ವ್ಯಕ್ತಿ ಗಾಯಗೊಂಡಿದ್ದನು. ಆದರೆ ಬೈಕ್ನ್ನು ಅಪ್ರಾಪ್ತ ಹುಡುಗ ಚಲಾಯಿಸುತ್ತಿದ್ದನು ಮತ್ತು ಆ ಹುಡುಗನಿಗೆ ತಂದೆಯೆ ಬೈಕ್ ಚಲಾಯಿಸಲು ನೀಡಿದ್ದನು.
ಈ ಅಪಘಾತದ ಕುರಿತು 1-07-2024ರಂದು ರಾಣೆಬೇನ್ನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ರಾಣಿಬೆನ್ನೂರು ಜೆಎಂಎಫ್‌ಸಿ ನ್ಯಾಯಲಯ ತಂದೆಗೆ 27 ಸಾವಿರ ದಂಡ ವಿಧಿಸಿದ್ದು. ಬೈಕ್ ಮಾಲೀಕ ತಪ್ಪಿತಸ್ಥ ಎಂದು ತೀರ್ಪು ನೀಡಿ ಈ ದಂಡವನ್ನು ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.