Wednesday, January 22, 2025

ಎಸ್​.ಎಂ ಕೃಷ್ಣರ ಸ್ಮಾರಕ ನಿರ್ಮಾಣದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ : ಶಿವರಾಜ್​ ತಂಗಡಗಿ

ಬೆಂಗಳೂರು : ರಾಜ್ಯದ ಧೀಮಂತ ನಾಯಕ ಎಸ್​ಎಂ ಕೃಷ್ಣ ಅವರು ನಿಧನರಾಗಿದ್ದು. ಬೆಳಿಗ್ಗೆಯಿಂದಲೆ ಸಾವಿರಾರು ಜನರು ಬಂದು ಅವರ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ. ಇದರ ನಡುವೆಯೆ ಅವರಿಗೆ ಸ್ಮಾರಕ ನಿರ್ಮಾಣ ಮಾಡಬೇಕು ಎಂಬ ಕೂಗು ಕೇಳುಬಂದಿದೆ.

ಇದರ ಬಗ್ಗೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ‘ ಎಸ್​ಎಂ.ಕೃಷ್ಣರ ಸ್ಮಾರಕ ನಿರ್ಮಾಣದ ಕುರಿತು ಸರ್ಕಾರದ ಜೊತೆ ಚಿಂತನೆ ನಡೆಸುತ್ತೇನೆ ಎಂದು ಪವರ್​ ಟಿವಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಎಸ್​​ಎಂ ಕೃಷ್ಣರ ಸ್ಮಾರಕ ನಿರ್ಮಾಣದ ಬಗ್ಗೆ ಸಿಎಂ ಹಾಗೂ ಡಿಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಅವರ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES