Sunday, December 22, 2024

ಎಸ್​.ಎಂ ಕೃಷ್ಣರ ಅಂತಿಮ ದರ್ಶನದ ವೇಳೆ ಭಾವುಕರಾದ ಡಿ.ಕೆ !

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕರ್ನಾಟಕ ರಾಜಕೀಯ ರಂಗದ ಮೇರು ವ್ಯಕ್ತಿತ್ವದ ವ್ಯಕ್ತಿ ಎಸ್​.ಎಂ ಕೃಷ್ಣರವರು ದೈವಾದೀನರಾಗಿದ್ದು. ಇವರ ನಿಧನದ ಸುದ್ದಿ ತಿಳಿದ ಕೂಡಲೇ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಡಿಸಿಎಂ ಡಿ.ಕೆ ಶಿವಕುಮಾರ್​ ಎಸ್​.ಎಂ ಕೃಷ್ಣರ ಅಂತಿಮ ದರ್ಶನವನ್ನು ಪಡೆದು ಭಾವುಕರಾಗಿದ್ದಾರೆ.

ಎಸ್​ಎಂ.ಕೃಷ್ಣರ ನಿಧನದ ಸುದ್ದಿ ತಿಳಿದ ಕೂಡಲೇ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಡಿ.ಕೆ ಶಿವಕುಮಾರ್​. ನೇರವಾಗಿ ಸದಾಶಿವನಗರದಲ್ಲಿರುವ ಅವರ ಸ್ವಗೃಹಕ್ಕೆ ಹೋಗಿ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಅವರ ಪಾರ್ಥಿವ ಶರೀರಕ್ಕೆ ನಮಿಸಿದ ಡಿ.ಕೆ ಶಿವಕುಮಾರ್​ ಕೆಲ ಕ್ಷಣ ಭಾವುಕರಾದರು.

 

ರಾಜಕೀಯವಾಗಿ ಎಸ್.ಎಂ ಕೃಷ್ಣರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಡಿ.ಕೆ ಶಿವಕುಮರ್​. ಇತ್ತೀಚೆಗೆ ಅವರ ಮಗಳನ್ನು ಎಸ್​ಎಂ ಕೃಷ್ಣರ ಮೊಮ್ಮಗನೊಂದಿಗೆ ವಿವಾಹ ಮಾಡಿಸುವುದರ ಮೂಲಕ ಸಂಬಂಧಿಕರಾಗಿದ್ದರು. ಈ ಮೂಲಕ ವೃತ್ತಿ ರಂಗದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿಯು ಡಿ,ಕೆ ಮತ್ತು ಎಸ್​ಎಂಕೆ ಅವರು ಅವಿನಾಭಾವ ಸಂಬಂಧ ಹೊಂದಿದ್ದರು. ಇದನ್ನೂ ಓದಿ : ಎಸ್​.ಎಂ ಕೃಷ್ಣರ ಅಂತಿಮ ದರ್ಶನದ ವೇಳೆ ಭಾವುಕರಾದ ಡಿ.ಕೆ !

 

ಪಾರ್ಥಿವ ಶರೀರದ ದರ್ಶನ ಪಡೆದ ಡಿ.ಕೆ ಶಿವಕುಮಾರ್​ ನೇರವಾಗಿ ಎಸ್​ಎಂ ಕೃಷ್ಣರ ಸ್ವಗ್ರಾಮ ಸೋಮನಹಳ್ಳಿಗೆ ಹೋಗಿದ್ದು. ಅಲ್ಲಿ ಅಂತ್ಯಕ್ರಿಯೆ ನಡೆಸುವ ಜಾಗದ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES