ಹಾಸನ : ಎತ್ತಿನಹೊಳೆ ಯೋಜನೆಗೆ ಜಮೀನು ವಶಪಡಿಸಿಕೊಂಡು ಅದಕ್ಕೆ ಪರಿಹಾರ ನೀಡದ ಹಿನ್ನಲೆಯಲ್ಲಿ ಮನನೊಂದ ರೈತ ಆತ್ಮಹತ್ಯೆಗೆ ಶರಣಾಗಿದ್ದು. 64 ವರ್ಷದ ರಂಗಸ್ವಾಮಿ ಮೃತ ದುರ್ದೈವಿ ಎಂದು ಮಾಹಿತಿ ದೊರೆತಿದೆ.
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ವಡ್ಡರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ರೈತ ರಂಗಸ್ವಾಮಿ ಎತ್ತಿನ ಹೊಳೆ ಯೋಜನೆಯಿಂದಾಗಿ ಸುಮಾರು 1 ಎಕರೆ 32 ಗುಂಟೆ ಜಮೀನನ್ನು ಕಳೆದುಕೊಂಡಿದ್ದನು. ಇದಕ್ಕೆ ಪರಿಹಾರ ಬರುತ್ತದೆ ಎಂದು ನಂಬಿದ್ದ ರಂಗಸ್ವಾಮಿ ಕೈ ತುಂಬಾ ಸಾಲ ಮಾಡಿಕೊಂಡಿದ್ದನು. ಇತ್ತೀಚೆಗೆ ಸಾಲ ಕೊಟ್ಟವರು ಸಾಲದ ಹಣ ವಾಪಾಸ್ ನೀಡುವಂತೆ ಒತ್ತಾಯ ಮಾಡುತ್ತಿದ್ದರು ಎಂದು ಮಾಹಿತಿ ದೊರೆತಿದೆ.
ಎಕರೆಗಟ್ಟಲೆ ಜಮೀನು ಕಳೆದುಕೊಂಡರು ರೈತನಿಗೆ ಜಿಲ್ಲಾಡಳಿತದಿಂದ ಇದುವರೆಗು ನಯಾಪೈಸಾ ಪರಿಹಾರ ನೀಡಿರಲಿಲ್ಲ. ಇದೇ ವಿಷಯಕ್ಕೆ ರೈತ ಇಂಜಿನಿಯರ್ ಜೊತೆ ಜಗಳವನ್ನು ಮಾಡಿಕೊಂಡಿದ್ದನು. ಇವೆಲ್ಲದರಿಂದ ಮನನೊಂದ ರೈತ ರಂಗಸ್ವಾಮಿ ಕಾಲುವೆಗೆ ದುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದು. ಎತ್ತಿಹೊಳೆ ಯೋಜನೆಯ ಕಾಲುವೆಯಲ್ಲೆ ಮೃತ ರೈತನ ಶವ ತೇಲುತ್ತಿದೆ.
ಎತ್ತಿನ ಹೊಳೆ ಯೋಜನೆ ಪರಿಹಾರ ಹಣವನ್ನು ಬಿಡುಗಡೆ ಮಾಡಲು ಲಂಚ ಕೇಳಿದ್ದರು ಎಂದು ಮೃತನ ಸಂಬಂಧಿಕರು ಆರೋಪಿಸಿದ್ದು. ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ. ಎತ್ತಿನ ಹೊಳೆ ಯೋಜೆನೆಯ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಬೇಕೆಂದು ಗ್ರಾಮಸ್ಥರು ಮತ್ತು ಕುಟುಂಬಸ್ಥರು ಆಗ್ರಹಿಸಿದ್ದು. ಹಳೇಬೀಡು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.