Thursday, December 19, 2024

ವಿಧ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಅತ್ಯಾಚಾರ : ಕಲಬುರಗಿಯಲ್ಲಿ ಬೃಹತ್​ ಪ್ರತಿಭಟನೆ !

ಕಲಬುರಗಿ:  ಅಪ್ರಾಪ್ತ ಬಾಲಕಿ ಮೇಲೆ ಶಿಕ್ಷಕನೆ ಅತ್ಯಾಚಾರ ಎಸಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಅತ್ಯಾಚಾರವನ್ನು ಕಂಡಿಸಿ ಕಲಬುರಗಿಯಲ್ಲಿ ಬೃಹತ್​ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

ಕಲಬುರಗಿಯ ಯಡ್ರಾಮಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನೆ  ಅತ್ಯಾಚಾರವೆಸಗಿದ್ದು. ಶಿಕ್ಷಕ ಹಾಜಿಮಂಗಲ್​​ ಎಂಬಾತನಿಂದ ಕೃತ್ಯವಾಗಿದ್ದು. ಅತ್ಯಾಚಾರವನ್ನು ಖಂಡಿಸಿ ಕಲಬುರಗಿಯಲ್ಲಿ ಬೃಹತ್‌ ಪ್ರತಿಭಟನೆ ಕೈಗೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ವಿವಿಧ ಮಠಧೀಶರು, ಹಿಂದೂಪರ ಸಂಘಟನೆಗಳೂ ಭಾಗಿಯಾಗಿದ್ದು. ಸಂತ್ರಸ್ಥ ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಇತ್ತಿಚೆಗೆ ಅಧಿಕಾರಶಾಹಿಗಳ ಕುಮ್ಮಕ್ಕಿನಿಂದ ಕಾನುನು ಸುವ್ಯವಸ್ಥೆ ಹದಗೆಟ್ಟಿದೆ ಆಕ್ರೋಶಗೊಂಡಿರುವ ಪ್ರತಿಭಟನಾಕಾರರು. ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿದ್ದಾರೆ. ಜೊತೆಗೆ ಸುಳ್ಳು ಅಟ್ರಾಸಿಟಿ ಪ್ರಕರಣಗಳಿಗು ಮಿತಿ ಇಲ್ಲದಂತಾಗಿದ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಎತ್ತಿನಹೊಳೆ ಯೋಜನೆ ಪರಿಹಾರ ವಿಳಂಬ : ಕಾಲುವೆಗೆ ಹಾರಿ ರೈತ ಆತ್ಮಹ*ತ್ಯೆ

ಉದ್ರಿಕ್ತರಿಂದ ಬೃಹತ್​ ಪ್ರತಿಭಟನೆ !

ಕಲಬುರಗಿ ನಗರದ ಬಂಜಾರಾ ಭವನದಿಂದ ಪ್ರೋಟೆಸ್ಟ್ ಆರಂಭವಾಗಿದ್ದು.  ಬಂಜಾರಾ ಭವನದಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಡಿಸಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಭಟನೆ ವೇಳೆ ಉದ್ರಿಕ್ತರು ಅಲ್ಲಲ್ಲಿ ಕಲ್ಲು ತೂರಾಟ ಮಾಡಿದ್ದು. ಕೆಲವು ಕಾರ್​ಗಳು, ಬೈಕ್​ಗಳು, ಆಟೋಗಳು ಸೇರಿದಂತೆ ಅನೇಕ ಅಂಗಡಿಗಳು ಹಾನಿಗೀಡಾಗಿದೆ ಎಂದು ತಿಳಿದು ಬಂದಿದೆ. ಈ ಸಮಯದಲ್ಲಿ ಆಟೋ ಚಾಲಕನೊಬ್ಬನ ತಲೆಗೆ ಕಲ್ಲೇಟು ಬಿದ್ದಿದ್ದು ತಲೆಯಿಂದ ರಕ್ತಸ್ತ್ರಾವವಾಗಿದೆ ಎಂದು ತಿಳಿದು ಬಂದಿದೆ. ​ಈ ಪ್ರತಿಭಟನೆಯಲ್ಲಿ ಸಾವಿರಾರು ಬಂಜಾರ ಸಮುದಾಯದ ಜನರು ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES