Wednesday, January 22, 2025

ಭೀಕರ ಬಸ್​​ ಅಪಘಾತ : ಚಾಲಕನ ನಿಯಂತ್ರಣ ತಪ್ಪಿ ಬಾರ್​​ಗೆ ನುಗ್ಗಿದ ಚಿಗರಿ ಬಸ್​ !

ಹುಬ್ಬಳ್ಳಿ : ನಗರದಲ್ಲಿ ಸಂಚಾರ ಮಾಡುವ ಚಿಗರಿ ಬಸ್​​ನಿಂದ ಡೆಡ್ಲಿ ಅಪಘಾತವಾಗಿದ್ದು. ಚಾಲಕನ ನಿಯಂತ್ರಣ ತಪ್ಪಿದ ಚಿಗರಿ ಬಸ್​ ರಸ್ತೆಯ ಬದಿಯಲ್ಲಿದ್ದ ಬಾರ್​ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಹುಬ್ಬಳ್ಳಿ-ಧಾರವಾಡ ಬಿಆರ್​ಟಿಎಸ್ ಚಿಗರಿ ಬಸ್​ನಿಂದ ಮತ್ತೊಂದು ಅವಘಡವಾಗಿದ್ದು. ನೆನ್ನೆ (ಡಿ.08) ಹುಬ್ಬಳ್ಳಿಯ ಬೈರಿದೇವರಕೊಪ್ಪದ ಬಳಿಯಲ್ಲಿ ಅಪಘಾತ ಸಂಭವಿಸಿದೆ. ಅತೀ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ಬಸ್​ ಅಪಘಾತಕ್ಕೆ ಈಡಾಗಿದೆ ಎಂದು ತಿಳಿದು ಬಂದಿದೆ.

ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ಹೊರಟಿದ್ದ ಚಿಗರಿ ಬಸ್ ಅಪಘಾತಕ್ಕೆ ಈಡಾಗಿದ್ದು. ಅತೀ ವೇಗವಾಗಿ ಚಲಾಯಿಸುತ್ತಿದ್ದರಿಂದ ಬಸ್​ನ ಸ್ಟೇರಿಂಗ್​ ರಾಡ್​ ಕಟ್​ ಆಗಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್​ ರಸ್ತೆಯ ಇನ್ನೊಂದು ಬದಿಯಲ್ಲದ್ದ ಬಾರ್​ಗೆ ಡಿಕ್ಕಿ ಹೊಡೆದಿದ್ದು. ಅಪಘಾತದ ರಭಸಕ್ಕೆ  ರಸ್ತೆ ಬದಿಯಲ್ಲಿದ್ದ ಬೈಕ್​ಗಳು ಜಖಂಗೊಂಡಿದೆ ಎಂದು ಮಾಹಿತಿ ದೊರೆತಿದೆ.

ಇದನ್ನೂ ಓದಿ : ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕೆಂದು ಆಗ್ರಹಿಸಿದ ಉದ್ದವ್​ ಠಾಕ್ರೆ ಮಗ !

ಬಸ್​ ಚಾಲಕನ ಅಚಾತುರ್ಯದಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದು. ಬಸ್​ ಚಾಲಕ ಶಿವಾನಂದ ವಡ್ಕರ್​ ಎಂಬುವವರಿಗೆ ಥಳಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES