Thursday, December 19, 2024

U19 Asia Cup : ಸತತ ಎರಡನೇ ಬಾರಿ ಬಾಂಗ್ಲಾ ಎದುರು ಎಡವಿದ ಭಾರತ !

ದುಬೈ: ಭಾರತದ ಕಿರಿಯರ ಕ್ರಿಕೆಟ್​​ ತಂಡ ಮತ್ತೇ ಬಾಂಗ್ಲಾದೇಶದ ಎದುರು ಸೋಲನುಭವಿಸಿದ್ದು. ಏಕದಿನ ಏಷ್ಯಾಕಪ್​ನಲ್ಲಿ ಸೋಲು ಅನುಭವಿಸಿದೆ ಎಂದು ಮಾಹಿತಿ ದೊರೆತಿದೆ.

ದುಬೈನ ಅಂತರ್​ರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ  ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾ 49.1 ಓವರ್​ಗಳಲ್ಲಿ 198 ರನ್​ಗಳಿಸಿ ಆಲೌಟ್​ ಆಯಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್​ ಆರಂಭಿಸಿದ ಭಾರತದ ತಂಡ ಕೇವಲ 35.2 ಓವರ್​ಗಳಲ್ಲಿ 139 ರನ್​ಗಳಿಗೆ ಸರ್ವಪತನ ಕಂಡಿತು.

ಐಪಿಎಲ್​ನಲ್ಲಿ ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದ ವೈಭವ್​ ಸೂರ್ಯವಂಶಿ ಮತ್ತು ಆಯುಷ್​ ಮ್ಹಾತ್ರೆ ತಂಡದ ಮೊತ್ತ 24ರನ್​ಗಳಿದ್ದಾಗ ಪೆವಿಲಿಯನ್​ ಸೇರಿದರು. ಕಳೆದ ಎರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದ ಬ್ಯಾಟರ್​ ಸೂರ್ಯವಂಶಿ ಈ ಪಂದ್ಯದಲ್ಲಿ ಕೇವಲನ 9 ರನ್​ಗಳಿಸಲಷ್ಟೆ ಶಕ್ತರಾದರು. ಆರಂಭಿಕ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದನ್ನೂ ಓದಿ :ಕೆರೆಗೆ ಬಿದ್ದ ಯುವತಿ : ಜೀವದ ಹಂಗು ತೊರೆದು ರಕ್ಷಿಸಿದ ಗೃಹರಕ್ಷಕ ಸಿಬ್ಬಂದಿ !

ನಂತರ ಕ್ರೀಸ್​ಗೆ ಬಂದ ಆಂದ್ರೆ ಸಿದ್ದಾರ್ಥ್​(20), ಕೆ.ಪಿ ಕಾರ್ತಿಕೇಯ (26), ಮತ್ತು ನಾಯಕ ಮೊಹಮ್ಮದ್​ ಅಮಾನ್​​ (26) ಎರಡಂಕಿ ರನ್​ಗಳಿಸಲಷ್ಟೆ ಶಕ್ತರಾದರು. ಆದರೆ ದೊಡ್ಡ ಇನಿಂಗ್ಸ್​ ಕಟ್ಟಲು ಯಾರಿಂದಲೂ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಹಾರ್ಧಿಕ್​ ರಾಜ್​ 24 ರನ್​ ಗಳಿಸಿ ಹೋರಾಟ ಮಾಡಿದರು  ಪಂದ್ಯ ಗೆಲ್ಲುವಲ್ಲಿ ಭಾರತ ತಂಡ ವಿಫಲವಾಯಿತು.

ಬಾಂಗ್ಲಾ ಪರ ಉತ್ತಮ ಬೌಲಿಂಗ್​ ಮಾಡಿದ ಇಕ್ಬಾಲ್​ ಹುಸೈನ್​ ಇಮಾಮ್​ ಮತ್ತು ನಾಯಕ ಮೊಹಮ್ಮದ್​ ಅಜಿಜುಲ್​ ಹಕಿಮ್​ ತಮಿಮ್​ ತಲಾ ಮೂರು ವಿಕೆಟ್​ ಗಳಿಸಿ ಬಾಂಗ್ಲಾ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

RELATED ARTICLES

Related Articles

TRENDING ARTICLES