ಬಳ್ಳಾರಿ : ಸಂಡೂರಿನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ‘ನಿಮ್ಮ ಋಣ ತೀರಿಸುವೆ ಎಂದು ಮಾತು ಆರಂಭಿಸಿದರು. ಮುಂದುವರಿದು ಮಾತನಾಡಿದ ಡಿ.ಕೆ ‘ಅಧಿಕಾರ ನಶ್ವರ. ಕಾಂಗ್ರೆಸ್ ಯೋಜನೆ ಕೆಲಸ ಅಜರಾಮರ.ಯಾವುದೇ ಸಾಧನೆ ಮಾಡಿದ್ರು ಮತದಾರನೇ ಈಶ್ವರ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಿಂದ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಬಳ್ಳಾರಿ ಕಾಂಗ್ರೆಸ್ನ ಭದ್ರಕೋಟೆ ಇಲ್ಲಿಂದಲೆ ಸೋನಿಯಾ ಗಾಂಧಿ ಕೂಡ ಆಯ್ಕೆಯಾಗಿದ್ದರು. ಅದಕ್ಕೆ ನಿಮಗೆ ಧನ್ಯವಾದಗಳು. ಸಂಡೂರಿನಲ್ಲಿ ಭೂಪತಿ ಮತ್ತು ಸಂತೋಶ್ ಲಾಡ್ ಬೇರೆ ಪಕ್ಷದಿಂದ ಗೆದ್ದಿದ್ದು ಬಿಟ್ಟರೆ ಸಂಡೂರಿನಲ್ಲಿ ನಿರಂತರವಾಗಿ ಕಾಂಗ್ರೆಸ್ ಗೆದ್ದಿದೆ.
ಇದನ್ನೂ ಓದಿ:ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್ ಪಲ್ಟಿ : 40ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಗಾಯ !
ಕಳೆದ ಚುನಾವಣೆಯಲ್ಲಿ 135 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದರೆ ನಗುತ್ತಿದ್ದರು. ಆದರೆ ಇದೀಗ ಉಪ ಚುನಾವಣೆಯಲ್ಲೀಯೂ ಗೆಲುವು ಸಾಧಿಸಿದ್ದೇವೆ. ಈಗ ಒಟ್ಟು 138 ಸ್ಥಾನಗಳು ನಮ್ಮ ಬಳಿ ಇದೆ. ಅದರ ಜೊತೆಗೆ ಬಿಜೆಪಿಯ ಕೆಲವು ಸ್ನೇಹಿತರು ಕೂಡ ಇದ್ದಾರೆ . ಇವೆಲ್ಲಾ ಸೇರಿಕೊಂಡು 140+ ಆಗಿದೆ.
ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರವನ್ನು ಕೇವಲ 6 ತಿಂಗಳೊಳಗೆ ಸರ್ಕಾರ ಕಿತ್ತು ಹಾಕ್ತೇನೆ ಎಂದು ಹೇಳಿದ್ದರು. ಆದರೆ ಅದು ಸಾಧ್ಯವೆ ಇಲ್ಲ. ಸಂಡೂರಿನ ಜನ ಇದು ಆಗಲ್ಲ ಎಂದು ಮುನ್ನುಡಿ ಬರೆದಿದ್ದಾರೆ. ಡ್ಯಾಂ ಗೇಟ್ ಮುರಿದಾಗ ಅಶೋಕ, ಜರ್ನಾದನ್ ರೆಡ್ಡಿ ಎಲ್ಳರು ಟೀಕೆ ಮಾಡಿದ್ದರು. ಆಗಲೇ ನಾನು ಟೀಕೆಗಳು ಸಾಯುತ್ತವೆ, ಕೆಲಸ ಉಳಿಯುತ್ತೆ ಎಂದು ಹೇಳಿದ್ದೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಇನ್ನಷ್ಟು ಮತಗಳನ್ನು ನಾವು ನೀರೀಕ್ಷೆ ಮಾಡಿದ್ದೇವು. ಆದರೆ ಜಾತಿ ವ್ಯವಸ್ಥೆ ಮೇಲೆ ಅವುಗಳನ್ನು ವಿಭಜನೆ ಮಾಡಿದರು. ಕುಮಾರಸ್ವಾಮಿಯವರ ಕ್ಷೇತ್ರವನ್ನು ಕಳೆದ 25 ವರ್ಷದಿಂದ ಗೆದ್ದಿರಲಿಲ್ಲ. ಆದರೆ ಜನರು ಗ್ಯಾರಂಟಿ ನೋಡಿ ಮತ ನೀಡಿದ್ದಾರೆ. ನಾನು ಮೊದಲೆ ಹೇಳಿದಂತೆ ಕಮಲ ಕೆರೆಯಲ್ಲಿ, ತೆನೆ ಹೊಲದಲ್ಲಿ ಮತ್ತು ಕೈ ಅಧಿಕಾರದಲ್ಲಿರಬೇಕು ಎಂದು ಹೇಳಿದರು.