ಲಖ್ನೋ : ಸಂಭಾಲ್ ಹಿಂಸಾಚಾರದ ವೇಳೆ ಪೊಲೀಸರ ಕ್ರಮವನ್ನು ಶ್ಲಾಘಿಸಿದ ಪತ್ನಿಗೆ ಪತಿ ತಲಾಖ್ ನೀಡಿದ ಘಟನೆ ಮೊರಾದಾಬಾದ್ ನಲ್ಲಿ ನಡೆದ್ದಿದ್ದು. ಇದೀಗ ಪತಿಯ ಕೃತ್ಯವನ್ನು ವಿರೋಧಿಸಿ ಪತ್ನಿ ಪೋಲಿಸರ ಮೊರೆ ಹೋಗಿದ್ದಾಳೆ ಎಂದು ತಿಳಿದು ಬಂದಿದೆ.
ನಿದಾ ಎಂಬಾಕೆ ಉತ್ತರ ಪ್ರದೇಶದ ಸಂಭಾಲ್ ಹಿಂಸಾಚಾರದ ವೀಡಿಯೊವನ್ನು ವೀಕ್ಷಿಸುತ್ತಿದ್ದರು. ಅಲ್ಲಿ ಮಸೀದಿ ಸಮೀಕ್ಷೆ ವೇಳೆ ನಡೆದ ಪ್ರತಿಭಟನೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದರು. ಪೊಲೀಸರ ಕ್ರಮದ ಬಗ್ಗೆ ನಿದಾ ಶ್ಲಾಘಿಸಿದಾಗ ಆಕೆಯ ಪತಿ ಅವಳಿಗೆ ಮೂರು ಬಾರಿ ತಲಾಖ್ ಎಂದು ಹೇಳಿ ವಿಚ್ಛೇದನ ನೀಡಿದ್ದಾನೆ ನೀಡಿದ್ದಾನೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ: ಬೈಕ್ ಓಡಿಸುವಾಗಲೆ ಹೃದಯಾಘಾತ : ಸಾ*ವನ್ನಪ್ಪಿದ ಬೈಕ್ ಸವಾರ!
ಮೊರಾದಾಬಾದ್ ನಿದಾ ತನ್ನ ಪತಿ ಎಜಾಜುಲ್ ವಿರುದ್ಧ ವಿಚ್ಛೇದನಕ್ಕಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ. ಮುಸ್ಲಿಂ ಪುರುಷರು ಮೂರು ಬಾರಿ ‘ತಲಾಖ್’ ಹೇಳುವ ಮೂಲಕ ತಮ್ಮ ಹೆಂಡತಿಯನ್ನು ತಕ್ಷಣವೇ ವಿಚ್ಛೇದನ ಮಾಡಲು ಅನುವು ಮಾಡಿಕೊಡುವ ‘ತ್ರಿವಳಿ ತಲಾಖ್‌ನ ವಿವಾದಾತ್ಮಕ ಅಭ್ಯಾಸವನ್ನು ಸುಪ್ರೀಂ ಕೋರ್ಟ್ 2017 ರಲ್ಲಿ ನಿಷೇಧಿಸಿದೆ.
ಇದನ್ನು ಸುಪ್ರೀಂ ಕೋರ್ಟ್ “ಅಸಂವಿಧಾನಿಕ” ಎಂದು ಕರೆದಿದೆ. 2019 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತನ್ನ ಹೆಂಡತಿಗೆ ತಕ್ಷಣವೇ ವಿಚ್ಛೇದನ ನೀಡುವ ಮುಸ್ಲಿಂ ಪುರುಷನ ಶತಮಾನಗಳ ಹಳೆಯ ಹಕ್ಕನ್ನು ಕಾನೂನುಬಾಹಿರಗೊಳಿಸುವ ಮಸೂದೆಯನ್ನು ಅಂಗೀಕರಿಸಿತು.