ಚಿಕ್ಕಬಳ್ಳಾಪುರ : ಮೊಬೈಲ್ ರಿಪೇರಿಗೆ ತಾಯಿ ಹಣ ಕೊಡದಿದ್ದಕ್ಕೆ ಬೇಸರಗೊಂಡ ಯುವಕ ಆತ್ಮಹತ್ಯೆಗೆ ಶರಣಾಗಿದ್ದು. ಮೃತ ಯುವಕನನ್ನು ಅಖಿಲ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಗೌರಿಬಿದನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯಲ್ಲಿ ಘಟನೆ ನಡೆದಿದ್ದು. ತಿಮ್ಮಯ್ಯ-ರಾಧಮ್ಮ ದಂಪತಿಗಳ ಪುತ್ರ ಅಖಿಲ್ ಹತ್ತನೇ ತರಗತಿ ಫೇಲ್ ಆಗಿದ್ದು ಕೆಲಸ ಮಾಡಿಕೊಂಡಿದ್ದನು. ಆತನ ಮೊಬೈಲ್ ಪೋನ್ ಹಾಳಾಗಿದ್ದರಿಂದ ಆತ ತನ್ನ ತಾಯಿಯ ಬಳಿಯಲ್ಲಿ ಮೊಬೈಲ್ ರಿಪೇರಿ ಮಾಡಿಸಲು ಹಣ ಕೇಳಿದ್ದನು.
ಇದನ್ನೂ ಓದಿ : ಬೈಕ್ ಓಡಿಸುವಾಗಲೆ ಹೃದಯಾಘಾತ : ಸಾ*ವನ್ನಪ್ಪಿದ ಬೈಕ್ ಸವಾರ!
ಈ ವೇಳೆ ತಾಯಿ ತನ್ನ ಬಳಿ ಹಣವಿಲ್ಲ, ಬೇರೆಯವರ ಮನೆಯಿಂದ ಸಾಲ ತೆಗೆದುಕೊಂಡು ಬರುತ್ತೇನೆ ಎಂದು ಮನೆಯಿಂದ ಹೊರಕ್ಕೆ ಹೋಗಿದ್ದಾಗ ಯುವಕ ಅಖಿಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಗೌರಿಬಿದನೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.