Saturday, December 21, 2024

ಮಕ್ಕಳ ಕಿರಿಕಿರಿ ಸಹಿಸದೆ ಆತ್ಮಹ*ತ್ಯೆಗೆ ಶರಣಾದ ವೃದ್ದ ತಂದೆ !

ಕಾರವಾರ : ಆತ ಬಂಗಾರದ ವ್ಯಾಪಾರ ಮಾಡುತ್ತಾ ಕೊಟ್ಯಾಂತರ ರೂಪಾಯಿ ಹಣ ಗಳಿಸಿದ್ದ, ಮೂವರು ಮಕ್ಕಳಿಗೂ ಮದುವೆ ಮಾಡಿ ಪ್ರತ್ಯೇಕ ಮನೆ ಮಾಡಿ ಕೊಟ್ಟಿದ್ದ. ಇಷ್ಟೆಲ್ಲ ಮಾಡಿದ್ರು ಆತನಿಗೆ ಮಕ್ಕಳು ನಿತ್ಯ ಕಿರಿ ಕಿರಿ ಮಾಡುತ್ತಿದ್ರು, ಮಕ್ಕಳ ಕಾಟ ತಾಳಲಾರದೆ ಮನೆ ಮುಂದಿರುವ ನಾಲ್ಕು ಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಶಂಕರಮಠ ರಸ್ತೆಯ ನಿವಾಸಿ. ಕೃಷ್ಣಾನಂದ ಪಾವಸ್ಕರ ಎಂಬ ಹೆಸರಿನ ಈ ವ್ಯಕ್ತಿ ಕಳೆದ ನಲವತ್ತು ವರ್ಷಗಳಿಂದ ಕಾರವಾರ ನಗರದಲ್ಲಿ ಬಂಗಾರದ ವ್ಯಾಪಾರ ಮಾಡುತ್ತಾ ಕೊಟ್ಯಾಂತರ ರೂಪಾಯಿ ಹಣ ಗಳಿಸಿದ್ದ. ಒಳ್ಳೆಯ ಮನೆ ಆಸ್ತಿ ಗಳಿಸಿದ್ದ ಈ ವೃದ್ಧನಿಗೆ ಮೂವರು ಗಂಡು ಮಕ್ಕಳಿದ್ದಾರೆ. ಮೂವರು ಕೂಡ ಪ್ರತ್ಯೇಕ ಬಂಗಾರದ ವ್ಯಾಪಾರ ಮಾಡುತ್ತಾ ಒಳ್ಳೆಯ ಹಣ ಸಂಪಾದಿಸಿ ಆರ್ಥಿಕವಾಗಿ ಸದೃಢ ರಾಗಿದ್ದಾರೆ. ಮೂವರಿಗೂ ಮದುವೆ ಆಗಿ ಮಕ್ಕಳಿದ್ದಾರೆ. ಇಷ್ಟೆಲ್ಲ ಸಮೃದ್ಧವಾಗಿರುವ ಈ ಕುಟುಂಬವನ್ನು ಬೆಳೆಸಿದ ವೃದ್ಧ ದಂಪತಿಗಳಿಗೆ ಮೂವರು ಮಕ್ಕಳು ನಿತ್ಯವೂ ಕಿರಿ ಕಿರಿ ಮಾಡುತ್ತಿದ್ರು. ತನ್ನ ಮಕ್ಕಳ ಮನಸ್ಥಿತಿಯನ್ನ ಮೊದಲೆ ಅರಿತಿದ್ದ ಈ ವೃದ್ಧ ತಾನು ಸಂಪಾದಿಸಿದ ಹಣದಲ್ಲಿ ಕೆಲವು ಆಸ್ತಿಯನ್ನ ತನ್ನ ಹತ್ತಿರ ಇಟ್ಕೊಂಡಿದ್ದ. ಯಾರಿಗೂ ಕೊಡದೆ ತನಗೆ ಮತ್ತು ಹೆಂಡತಿಯ ಜೀವನೋಪಾಯಕ್ಕೆ ಬೇಕಾಗುತ್ತೆ ಅಂತಾ ಮಕ್ಕಳು ಎಷ್ಟೆ ಕೇಳಿದ್ರು ಅದು ನನಗೆ ಬೇಕು ಅಂತಾ ಗದರಿಸಿ ಸುಮ್ಮನಾಗಿಸಿದ್ದ.

ಇದನ್ನೂ ಓದಿ:  ಉದ್ಯೋಗಿ ಆತ್ಮಹತ್ಯೆ : ಸಾವಿನ ಮನೆಯಲ್ಲಿ ಕಣ್ಣೀರಾಕಿದ ಕಾರ್ಮಿಕ ಸಚಿವ ಸಂತೋಷ್​ ಲಾಡ್​

ಆಗ ಆಗ ಮೂವರು ಮಕ್ಕಳಿಗೂ ಮತ್ತು ವೃದ್ಧನಿಗೂ ಜಗಳ ನಡೆಯುತ್ತಲೆ ಇತ್ತು. ಕಳೆದ ಕೆಲವು ದಿನಗಳಿಂದ ಕಿರಿಯ ಮಗನಾದ ವಿನಯ ಮನೆಯಲ್ಲಿ ದಂಪತಿಗಳು ವಾಸವಾಗಿದ್ರು. ತಂದೆ ಕಡೆ ಇರುವ ಆಸ್ತಿಯನ್ನೆಲ್ಲ ಕಿರಿಯ ಮಗನ ಪಾಲಾಗುತ್ತೆ ಅಂತಾ ಆಗ ಆಗ ಆತನ ಮನೆಗೆ ಹೋಗಿ ಆಸ್ತಿ ಪಾಲು ಮಾಡಿ ಕೊಟ್ಟುಬಿಡಿ ಅಂತಾ ದುಂಬಾಲು ಬಿದ್ದಿದ್ರು. ಇತ್ತ ಕಿರಿಯ ಮಗ ಕೂಡ ನನ್ನ ಮನೆಯಲ್ಲಿ ವಾಸವಾಗಿದ್ದಿರಿ ಆ ಆಸ್ತಿಯನ್ನ ತನ್ನ ಹೆಸರಿನಲ್ಲಿ ಮಾಡಿಸಿ ಅಂತಾ ತಂದೆಯನ್ನ ಪೀಡಿಸುತ್ತಿದ್ದ ಎನ್ನಲಾಗಿದೆ. ಹೀಗೆ ಮಕ್ಕಳ ಕಾಟಕ್ಕೆ ಬೇಸತ್ತಿದ್ದ ಕೊಟ್ಯಾಧೀಶ ವೃದ್ಧ, ತಮ್ಮ ಮನೆಯ ಮುಂದಿರುವ ನಾಲ್ಕು ಮಹಡಿ ಕಟ್ಟಡ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಟ್ಟಡದಿಂದ ಹಾರಿದ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರ ಬದಲು. ಮೂವರು ಮಕ್ಕಳು ಆತನ ಮೃತ ದೇಹದ ಮುಂದೆ ಜಗಳ ಆಡ ತೊಡಗಿದ್ರು.

ಒಟ್ಟಾರೆಯಾಗಿ ಜೀವನ ಪೂರ್ತಿ ಹಣಕ್ಕಾಗಿ, ಮನೆಗಾಗಿ, ಮಕ್ಕಳ ಸುಖಕ್ಕಾಗಿ ಶ್ರಮಿಸಿದ್ದ ಆ ವೃದ್ದನ ಕಡೆಯ ದಿನಗಳಲ್ಲಿ ನೆಮ್ಮದಿಯೆಂಬುದೆ ಸಿಗದೆ ಅಂತ್ಯವಾಗಿದೆ.

RELATED ARTICLES

Related Articles

TRENDING ARTICLES