ಹುಬ್ಬಳ್ಳಿ: ಕೆಲಸದಿಂದ ತೆಗೆದಿದ್ದಕ್ಕೆ ಮನನೊಂದ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು 56 ವರ್ಷದ ಲಿಂಗನಗೌಡ ಎಂದು ಗುರುತಿಸಲಾಗಿದೆ. ಮೃತನ ಮನೆಗೆ ಭೇಟಿ ನೀಡಿದ ಕಾರ್ಮಿಕ ಸಚಿವ ಸಂತೋಶ್ ಲಾಡ್ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ ಎಂದು ಮಾಹಿತಿ ದೊರೆತಿದೆ.
ಹುಬ್ಬಳ್ಳಿಯ ನಂದಗೋಕುಲ ಏರಿಯಾದಲ್ಲಿ ಘಟನೆ ನಡೆದಿದ್ದು. 56 ವರ್ಷದ ಲಿಂಗನಗೌಡ ಕಳೆದ 30 ವರ್ಷಗಳಿಂದ BDK ಕಂಪನಿಯ ಪೇಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ 11 ತಿಂಗಳ ಹಿಂದೆ ಕಂಪನಿಯು ಕೆಲವು ಕೆಲಸಗಾರರನ್ನು ಕೆಲಸದಿಂದ ತೆಗೆದಿದ್ದರು. ಇದರಲ್ಲಿ ಲಿಂಗನಗೌಡರು ಸಹ ಇದ್ದರು. ಇದನ್ನು ವಿರೋಧಿಸಿ ಕೆಲವು ನೌಕರರು ಪ್ರತಿಭಟನೆಯನ್ನು ಮಾಡಿದ್ದರು ಮತ್ತು ಈ ಪ್ರತಿಭಟನೆಯಲ್ಲಿ ಲಿಂಗನಗೌಡರು ಕೂಡ ಭಾಗಿಯಾಗಿದ್ದರು.
ಆದರೆ ಇಂದು ಏಕಾಏಕಿ ಮನೆಯಲ್ಲಿ ಲಿಂಗನಗೌಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು. ಉದ್ಯೋಗ ಕಳೆದುಕೊಂಡು ಖಿನ್ನತೆಗೆ ಜಾರಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಮೃತರ ಮನೆಗೆ ಆಗಮಿಸಿದ ಸಚಿವ ಸಂತೋಶ್ ಲಾಡ್ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದು. ಮನೆಯವರನ್ನು ನೋಡಿ ಕೆಲ ಕ್ಷಣ ಸಂತೋಶ್ ಲಾಡ್ ಕೂಡ ಭಾವುಕರಾದರು ಎಂದು ತಿಳಿದು ಬಂದಿದೆ.