Sunday, January 19, 2025

ಅವಕಾಶಗಳು ಹುಡುಕಿ ಬರೋದಿಲ್ಲ : ಅವನ್ನು ನಾವೇ ಸೃಷ್ಟಿಸಿಕೊಳ್ಳಬೇಕು : ಡಿ.ಕೆ ಶಿವಕುಮಾರ್​

ರಾಮನಗರ : ಜಿಲ್ಲೆಯಲ್ಲಿ ಕೃಷಿ ಕಾಲೇಜನ್ನು ಉದ್ಘಾಟನೆ ಮಾಡಿ ಮಾತನಾಡಿದ ಡಿಸಿಎಂ. ಡಿ.ಕೆ ಶಿವಕುಮಾರ್​ ‘ಅವಕಾಶಗಳು ಯಾರನ್ನು ಹುಡುಕಿಕೊಂಡು ಬರೋದಿಲ್ಲ, ಅವುಗಳನ್ನು ನಾವೇ ಸೃಷ್ಠಿಸಿಕೊಳ್ಳಬೇಕು. ರಾಮನಗರದ ಜನರು ಕೂಡ ಬೆಂಗಳೂರಿನ ಜಿಲ್ಲೆಯವರು, ಆದ್ದರಿಂದ ನಿಮ್ಮ ತಂದೆ ತಾಯಿಯರಿಗೆ ಆಸ್ತಿಯನ್ನು ಮಾರಾಟ ಮಾಡದಂತೆ ಹೇಳಿ’ ಎಂದು ಹೇಳಿದರು.

ರಾಮನಗರದಲ್ಲಿ ಮಾತನಾಡಿದ ಡಿಸಿಎಂ ‘ಇವತ್ತಿನ ಮಕ್ಕಳು ಬಹಳ ಬುದ್ದಿವಂತರಾಗಿದ್ದಾರೆ. ಶಿಕ್ಷಕರಿಗಿಂತ ವಿಧ್ಯಾರ್ಥಿಗಳೇ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಇನ್ಮುಂದೆ ಕಾಲೇಜಿನಲ್ಲಿ ನಡೆಯುವ ಸಭೆ- ಸಮಾರಂಭಗಳನ್ನು ವಿಧ್ಯಾರ್ಥಿಗಳೇ ನಡೆಸಬೇಕು. ಶಿಕ್ಷಕರು ಆ ರೀತಿಯಾಗಿ ಮಕ್ಕಳನ್ನು ರೂಪಿಸಬೇಕು. ನಾನೇನು ಶಾಶ್ವತನಲ್ಲ ಈ ಮಕ್ಕಳಲ್ಲೆ  ಮತ್ತೊಬ್ಬ ಡಿಕೆಶಿ ಬರಬೇಕು’ ಎಂದು ಹೇಳಿದರು.

ಆಸ್ತಿ ಮಾರದಂತೆ ಸಲಹೆ ನೀಡಿದ ಡಿ.ಸಿ.ಎಂ !

ಮುಂದುವರಿದು ಮಾತನಾಡಿದ ಡಿ.ಕೆ ಶಿವಕುಮಾರ್​ ‘ ನಾವೆಲ್ಲರು ಬೆಂಗಳೂರು ಜಿಲ್ಲೆಯವರು ಎಂಬುದನ್ನು ಮಕ್ಕಳು ತಲೆಯಲ್ಲಿ ಇಟ್ಟುಕೊಳ್ಳಿ. ಜಮೀನು ಮಾರಾಟ ಮಾಡದಂತೆ ನಿಮ್ಮ ಪೋಷಕರಿಗೆ ತಿಳಿಸಿ. ಮುಂದೆ ನಿಮ್ಮ ಜಮೀನಿಗೆ ದೊಡ್ಡ ಮಟ್ಟದ ಬೆಲೆ ಬರಲಿದೆ’ ಎಂದು ಹೇಳಿದರು.

ಮುಂದೆ ಕನಕಪುರ ಸಾಕಷ್ಟು ಅಭಿವೃದ್ದಿಯಾಗಲಿದೆ. ಹಾರೋಹಳ್ಳಿ ಸಮೀಪ ಸಾಕಷ್ಟು ಫ್ಯಾಕ್ಟರಿಗಳು ಆಗ್ತಿದೆ.
ಎಲ್ಲರಿಗೂ ಇಲ್ಲಿಯೇ ಉದ್ಯೋಗ ಸಿಗುವ ಅವಕಾಶ ಇದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ರಾಮನಗರದಲ್ಲಿ ನಿರ್ಮಾಣ ಆಗ್ತಿದೆ. ಇದೆಲ್ಲದರಿಂದ ಜಿಲ್ಲೆಗೆ ಮುಂದೆ ಉಜ್ವಲ ಭವಿಷ್ಯವಿದೆ. ನೀವು ಇಲ್ಲೆ ಓದಿ ಬೆಂಗಳೂರು ವಿಧ್ಯಾರ್ಥಿಗಳಿಗೆ ಕಾಂಪಿಟೇಶನ್​ ಕೊಡಬಹುದು. ಕನಕಪುರದ ಜನತೆ ನನಗೆ ಎಂಟು ಬಾರಿ ಗೆಲ್ಲಿಸಿ ದೊಡ್ಡ ಶಕ್ತಿ ನೀಡಿದ್ದಾರೆ. ಇದನ್ನು ಉಳಿಸಿಕೊಂಡು ಹೋಗವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ತಮ್ಮ ಕಾಲೇಜು ಜೀವನವನ್ನು ನೆನಪಿಸಿಕೊಂಡ ಡಿ,ಕೆ 

ಖಾಸಗಿ ಕೃಷಿ ಕಾಲೇಜಿಗೆ ಚಾಲನೆ ನೀಡಿದ ಡಿ,ಕೆ ಶಿವಕುಮಾರ್​​ ಮಾತನಾಡುತ್ತಾ ತಮ್ಮ ಕಾಲೇಜು ದಿನಗಳನ್ನು ನೆನೆಸಿಕೊಂಡರು. ‘ಪ್ರತಿ ಮನುಷ್ಯನಿಗೆ ವಿದ್ಯೆ ಬಹಳ ಮುಖ್ಯ, ನಾನು ರಾಜಕೀಯಕ್ಕೆ ಬಂದೆ ಮೇಲೆ ಪದವಿ ಪಡೆದೆ, ನಂತರ ಮುಕ್ತ ವಿವಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪಡೆದುಕೊಂಡೆ’ ಎಂದು ಹೇಳಿದರು.

ಮಕ್ಕಳು ಕೇವಲ ಡಾಕ್ಟರ್​​, ಇಂಜಿನಿಯರ್​ ಆಗೋದಷ್ಟೆ ಮುಖ್ಯವಲ್ಲ. ಅವರು ಜನರಿಗೆ ಕೆಲಸ ಕೊಡುವ  ಉದ್ಯಮ ಸ್ಥಾಪನೆ ಮಾಡಬೇಕು. ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಬೇಕು ಎಂದು ಹೇಳಿದರು.

RELATED ARTICLES

Related Articles

TRENDING ARTICLES