Wednesday, January 22, 2025

ಅವರಿಬ್ಬರೆ ಒಪ್ಪಂದ ಮಾಡ್ಕೊಂಡ್ರೆ, ನಾವೇನ್​​ ಮಾಡ್ಬೇಕು : ಡಿ.ಕೆ.ಶಿ ಬಗ್ಗೆ ಪರಮೇಶ್ವರ್​ ಅಸಮಧಾನ!

ಬೆಂಗಳೂರು : ಇತ್ತೀಚೆಗೆ ಡಿಸಿಎಂ ಡಿ,ಕೆ ಶಿವಕುಮಾರ್ ಖಾಸಗಿ ಮಾಹಿನಿಯಲ್ಲಿ ನಡೆದ ಸಂದರ್ಶನದಲ್ಲಿ ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ಜೊತೆ ಒಪ್ಪಂದವಾಗಿದೆ ಎಂದು ಹೇಳಿದ್ದರು. ಈ ಮಾತು ಕರ್ನಾಟಕ ರಾಜಕೀಯ ರಂಗದಲ್ಲಿ ಕುತೂಹಲ ಮೂಡಿಸಿತ್ತು. ಇದರ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್​ ‘ ಅವರಿಬ್ಬರೆ ಒಪ್ಪಂದ ಮಾಡಿಕೊಂಡು, ರಾಜಕೀಯ ಮಾಡೋದಾದ್ರೆ ನಾವೆಲ್ಲ ಯಾಕೆ ಇರಬೇಕು ಎಂದು ಪರೋಕ್ಷವಾಗಿ ತಾವು ಸಿಎಂ ರೇಸ್​ನಲ್ಲಿದ್ದೇನೆ ಎಂದು ಹೇಳಿದರು.

ಡಿ.ಕೆ ಶಿವಕುಮಾರ ಒಪ್ಪಂದದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಪರಮೇಶ್ವರ ‘ಯಾವ ಒಪ್ಪಂದ ಆಗಿದ್ದು ನಮಗೆ ಗೊತ್ತಿಲ್ಲ, ನಾನು ಇಬ್ಬರು ಮೂರು ಜನರನ್ನ ದೆಹಲಿಯಲ್ಲೂ ಕೇಳಿದೆ, ಆದರೆ ಒಪ್ಪಂದ ಆಗಿದೆ ಎಂದು ಯಾರು ಹೇಳಿಲ್ಲ. ಶಿವಕುಮಾರ ಯಾವ ಅರ್ಥದಲ್ಲಿ ‌ಹೇಳಿದ್ರೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಯಾವುದೇ ಒಪ್ಪಂದ ಆಗಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಒಪ್ಪಂದ ಆಗಿದೆ ಅಂತಾದ್ರೆ ನಾವೆಲ್ಲ ಯಾಕೆ ಇರಬೇಕು.
ಅವರಿಬ್ಬರೇ ರಾಜಕಾರಣ ಮಾಡಲಿ ,ಅವರಿಬ್ಬರೇ ನಡೆಸಿ ಬಿಡಲಿ, ಬೇರೆ ಅವರು ಇರೋದೇ ಬೇಡವಾ? ಎಂದು ಅಸಮಧಾನ ವ್ಯಕ್ತಪಡಿಸಿದರು.

 

RELATED ARTICLES

Related Articles

TRENDING ARTICLES