ಗದಗ: ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ‘ಇಡಿ ಎಂಬುದು ಎನ್ಫೋರ್ಸಮೆಂಟ್ ಡೈರೆಕ್ಟರೆಟ್ ಅಲ್ಲ ಅದೊಂದು ರಾಜಕೀಯ ಪ್ರೇರಿತಾ ಏಜೆನ್ಸಿಯಾಗಿದೆ. ಕೇವಲ ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡುವ ಕೆಲಸ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಇಡಿ ಕೇವಲ ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡುತ್ತಿವೆ ಎಂದು ಹೇಳಿದ ಕೃಷ್ಣ ಬೈರೇಗೌಡ. ಇಡಿಯವರು ಇಲ್ಲಿಯವರೆಗೂ ದೇಶದಲ್ಲಿ ಯಾರ ಯಾರ ಮೇಲೆ ಕೇಸ್ ಹಾಕಿದ್ದಾರೆ ಎಂದು ನೋಡಿ. ಕೇವಲ ರಾಜಕೀಯ ವಿರೋಧಿಗಳ ಮೇಲೆ ಕೇಸ್ ಹಾಕಿದ್ದಾರೆ. ಇವರು ಎಂದಾದರು ಸ್ವಿಸ್ ಬ್ಯಾಂಕ್ನಲ್ಲಿ ಹಣ ಇಟ್ಟವರ ಮೇಲೆ, ಕಪ್ಪು ಹಣ ಸಂಗ್ರಹ ಮಾಡಿದವರ ಮೇಲೆ ಕೇಸ್ ಹಾಕಿದ್ದಾರ ಎಂದು ಪ್ರಶ್ನಿಸಿದರು.
ಮುಂದುವರಿದು ಮಾತನಾಡಿದ ಕೃಷ್ಣ ಬೈರೇಗೌಡ ‘ಇ.ಡಿ ಬಿಜೆಪಿಯ ಒಂದು ಅಂಗ ಸಂಸ್ಥೆಯಾಗಿದೆ.
ಈ ಅಂಗಸಂಸ್ಥೆ ಕೆಲಸ, ರಾಜಕೀಯ ವಿರೋಧಿಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ರಾಜಕೀಯ ವಿರೋಧಿಗಳಿಗೆ ಹಿಟ್ ಆಂಡ್ ರನ್ ಮಾಡೊ ಕೆಲಸ ಮಾಡುತ್ತಿದೆ. ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್ 3 ಸ್ಥಾನ ಗೆದ್ದ ಮೇಲೆ ಬಿಜೆಪಿ ನವರಿಗೆ ಸಹಿಸಲು ಆಗುತ್ತಿಲ್ಲ. ಕಳೆದ ವಿಧಾನಸಭೆ ಹಾಗೂ ಉಪಚುನಾವಣೆಯಲ್ಲೂ ನಮ್ಮನ್ನು ಸೋಲಿಸಲು ಆಗಲಿಲ್ಲ. ಅದಕ್ಕೆ ಇಡಿ ಎಂಬ ಸೀಳು ನಾಯಿಯನ್ನು ನಮ್ಮ ಮೇಲೆ ಬಿಟ್ಟಿದಾರೆ
ಇದು ಪೊಲಿಟಿಕಲ್ ಅಟ್ಯಾಕ್ ಎಂದು ಹೇಳಿದರು.
ವಕ್ಫ್ ವಿಚಾರವಾಗಿ ಕೃಷ್ಣ ಬೈರೇಗೌಡ ಮಾತು !
ವಕ್ಫ್ ಬೋರ್ಡ್ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ ಟೀಮ್ ಪ್ರತ್ಯೇಕ ಹೋರಾಟ ಕುರಿತು ಮಾತನಾಡಿದ ಕೃಷ್ಣ ಬೈರೇಗೌಡ ‘ಬಿಜೆಪಿಯವರ ಅವಧಿಯಲ್ಲಿ ಸುಮಾರು 4 ಸಾವಿರ ಆಸ್ತಿ ವಕ್ಫ್ ಖಾತೆಗೆ ಮಾಡಿಕೊಟ್ಟಿದ್ದಾರೆ
ಆಗ ಇವರೆಲ್ಲಾ ಎಲ್ಲಿ ಹೋಗಿದ್ರು? ಬಿಜೆಪಿಯವರು ಹೋರಾಟ ಮಾಡ್ತಿರುವುದು ಜನರನ್ನು ಯಾಮಾರಿಸಲು.
ಕಾಂಗ್ರೆಸ್ ಸರ್ಕಾರದ ಮೇಲೆ ಇರುವ ಜನರ ಅಭಿಮಾನ ಸಹಿಸಲು ಬಿಜೆಪಿಗೆ ಆಗುತ್ತಿಲ್ಲ. ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಜನರ ಮನಸ್ಸು ಬೇರೆಕಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರವರ ಮಧ್ಯನೇ ಬಣ ರಾಜಕೀಯ ನಡೆಯುತ್ತಿದೆ. ಅವರ ಹೋರಾಟ ನಡೆಯುತ್ತಿರುವುದು ಅವರ ರಾಜಕೀಯ ಮೇಲಾಟಕ್ಕೆ
ಅವರ ಪಕ್ಷದ ಒಳಗಿನ ಮೇಲಾಟಕ್ಕೆ ಹೋರಾಟ ನಡೆಯುತ್ತಿದೆ ಎಂದು ಹೇಳಿದರು.