ಬೆಂಗಳೂರು : ನಗರದ ನರನಾಡಿ ಎಂದೆ ಕರೆಯಲ್ಪಡುವ ಬಿಎಂಟಿಸಿಯ ಅನಾಹುತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಇಷ್ಟು ದಿನ ರಸ್ತೆ ಮಧ್ಯೆ ಕೆಟ್ಟು ಜನರಿಗೆ ತೊಂದರೆ ನೀಡುತ್ತಿದ್ದ ಬಸ್ಗಳು. ಇದೀಗ ಜನರ ಪ್ರಾಣಾಕ್ಕೆ ಕಂಟಕವಾಗಿ ಪರಿಣಮಿಸಿವೆ.
ಹೌದು ನಿನ್ನೆ ಬೆಳಗ್ಗೆ 9-30 ಕ್ಕೆ ವೈಟ್ಫೀಲ್ಡ್ ಬಳಿಯ ಕೆಟಿಪಿಓ ಬಸ್ ಸ್ಟ್ಯಾಂಡ್ ಬಳಿಯಲ್ಲಿ ಬಿಎಂಟಿಸಿ ಬಸ್ನ ಟೈರ್ ಬ್ಲಾಸ್ಟ್ ಆಗಿದ್ದು. ಇಬ್ಬರು ಪ್ರಯಾಣಿಕರು ಆಸ್ಪತ್ರೆ ಪಾಲಾಗಿದ್ದಾರೆ ಎಂದು ಮಾಹಿತಿ ದೊರೆತಿದೆ. ರೂಟ್ ನಂ- 500 CA/A ಎಂಬ ರೂಟ್ನಲ್ಲಿ ಚಲಿಸುವ KA- 57 F3414 ನಂಬರ್ನ ಬಸ್ ಟೈರ್ ಬ್ಲಾಸ್ಟ್ ಆಗಿದೆ.
ಡಿಪೋ ನಂಬರ್ 33ರ ಎಜಿಎಸ್ ಲೇಔಟ್ ಹರೇಹಳ್ಳಿಗೆ ಸೇರಿದ ಬಸ್ನ ಟೈರ್ ಬ್ಲಾಸ್ಟ್ ಆಗಿದೆ. ಬಸ್ ಹಿಂಬಾಗದ ಚಕ್ರ ಬ್ಲಾಸ್ಟ್ ಆಗಿದ್ದು. ಹಿಂಬಾಗದ ಸೀಟ್ನಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದೆ. ಉತ್ತರ ಪ್ರದೇಶ ಮೂಲದ ಕುಮಾರ್ ಅಜಯ್ ಮತ್ತು ಜಿತೇಂದ್ರ ಎಂಬುವವರಿಗೆ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ. ಇಬ್ಬರು ಪ್ರಯಾಣಿಕರನ್ನು ವೈದೇಹಿ ಆಸ್ಪತ್ರೆಗೆ ದಾಖಲು ಮಾಡಿದ್ದು. ಇಬ್ಬರು ಪ್ರಯಾಣಿಕರ ಕಾಲು ಮತ್ತು ಕೈಗೆ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ.