ದೆಹಲಿ : ರಾಷ್ಟ್ರೀಯ ಖಾಸಗಿ ವಾಹಿನಿಯಲ್ಲಿ ನಡೆದ ಸಂದರ್ಶನದಲ್ಲಿ ಭಾಗವಹಿಸಿದ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಿಎಂ ಆಗುವ ಕನಸನ್ನು ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ಗೆ ನಾವು ನಿಷ್ಠರಾಗಿದ್ದು. ಅವರು ಏನು ಹೇಳುತ್ತಾರೋ ಆ ರೀತಿ ನಾವು ಕೇಳುತ್ತೇವೆ ಎಂದು ಹೇಳಿದರು.
ಸಂದರ್ಶನದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ‘ಕನಸು ಕಾಣುವುದು ತಪ್ಪಲ್ಲ, ಯಾರ ಕನಸನ್ನು ನಾವು ತಡೆದು ನಿಲ್ಲಿಸಲಾಗುವುದಿಲ್ಲ. ಆದರೆ ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ನನ್ನ ಶಕ್ತಿ ಮತ್ತು ದುರ್ಬಲತೆ ಬಗ್ಗೆ ಹೈಕಮಾಂಡ್ಗೆ ಗೊತ್ತಿದೆ. ನನ್ನ ಶಕ್ತಿಯ ಬಗ್ಗೆ ಹೇಳೋದಿಲ್ಲ, ಆದರೆ ನನಗೆ ಏನು ಜವಬ್ದಾರಿ ಕೊಟ್ಟಿದ್ದಾರೋ ಅದನ್ನು ಸಂಪೂರ್ಣ ಮಾಡಿದ್ದೇನೆ’ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಡಿ.ಕೆ ಶಿವಕುಮಾರ್ ‘ ನಮ್ಮ ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರು ನಾವು ಅದಕ್ಕೆ ಬದ್ದರಾಗಿರುತ್ತೇವೆ. ಗಾಂಧಿ ಕುಟುಂಬದ ಬಗ್ಗೆ ನಮಗೆ ಪ್ರೀತಿ ಇದೆ ಮತ್ತು ಈ ಕುಟುಂಬಕ್ಕೆ ನಾವು ನಿಷ್ಠೆಯಿಂದ ಇದ್ದೇವೆ.
ನಮ್ಮ ನಿಷ್ಠೆಗೆ ತಕ್ಕ ಪ್ರತಿಫಲ ಸಿಗುತ್ತೇ ಅನ್ನೋ ಭರವಸೆ ಇದೆ. ಅದಕ್ಕೆ ನಾವು ಕೂಡ ಆತ್ಮವಿಶ್ವಾಸದಿಂದ ಕಾಯುತ್ತಿದ್ದೇವೆ. ಸಿಎಂ ವಿಚಾರವಾಗಿ ನಮ್ಮ ಮತ್ತು ಹೈಕಮಾಂಡ್ ನಡುವೆ ಮಾತುಕತೆಯಾಗಿದೆ. ಅದನ್ನು ನಾನು ಮಾದ್ಯಮದ ಮುಂದೆ ಬಹಿರಂಗ ಪಡಿಸಿಲ್ಲ ಎಂದು ಹೇಳಿದರು.