Sunday, December 15, 2024

ಡಾಂಬರ್​ ಕಾಯಿಸುವ ಟ್ಯಾಂಕ್​ ಬಿದ್ದು ಯುವಕ ಸಾವು !

ಹಾವೇರಿ : ಡಾಂಬರ್ ಕಾಯಿಸಲು ಬಳಸುವ ಎಲ್ ಡಿ ಓ ಆಯಿಲ್ ಟ್ಯಾಂಕ್ ನಲ್ಲಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ್ದು. 20 ವರ್ಷದ ಅಭಿಷೇಕ್​ ಗೌಡಗೇರಿ ಮೃತ ದುರ್ದೈವಿ ಎಂದು ಮಾಹಿತಿ ದೊರೆತಿದೆ.

ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಕಾಕೋಳ ತಾಂಡದ ನಿವಾಸಿ ಅಭಿಷೇಕ ಗೌಡಗೇರಿ ಮೃತನಾಗಿದ್ದು. ಮಕರಿ ಗ್ರಾಮದಿಂದ ಚಿಕ್ಕಯಡಿ ಗ್ರಾಮದ ರಸ್ತೆ ಡಾಂಬರಿಕರಣ ಮಾಡುವ ವೇಳೆ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.

ಆಯಿಲ್​ ಟ್ಯಾಂಕ್​ನ ವಾಲ್​ನಲ್ಲಿ ಬಿದ್ದಿದ್ದ ಕಸ ತೆಗೆಯಲು ಯುವಕ ತನ್ನ ಎರಡು ಕಾಲುಗಳನ್ನು ಟ್ಯಾಂಕ್​ನಲ್ಲಿ ಇಳಿಬಿಟ್ಟಿದ್ದಾನೆ. ಆದರೆ ದುರಾದೃಷ್ಟವಶಾತ್​ ಯುವಕ ಆಯತಪ್ಪಿ ಟ್ಯಾಂಕ್​ನಲ್ಲಿ ಬಿದ್ದಿದ್ದು, ಮೇಲೆ ಬರಲಾಗದೆ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಘಟನೆ ಸಂಬಂಧ ರಟ್ಟಿಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES