ಕಲಬುರಗಿ : ನವೆಂಬರ್ 26 ರಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ವಕ್ಫ್ ವಿರುದ್ದದ ಹೋರಾಟದಲ್ಲಿ ಚಂದ್ರಶೇಖರ ಸ್ವಾಮೀಜಿ ನೀಡಿದ ಅವಹೇಳನಕಾರಿ ಹೇಳಿಕೆ ಬಗ್ಗೆ ಕಿಡಿಕಾರಿದ ಸಚಿವ ಪ್ರಿಯಾಂಕ ಖರ್ಗೆ ಬಿಜೆಪಿಯವರ ಮೇಲೆ ವಾಗ್ದಾಳಿ ನಡೆಸಿದ್ದು. ಸ್ವಾಮೀಜಿಗಳು ಏನೇ ಹೇಳಿದರು ಕ್ರಮ ಕೈಗೊಳ್ಳಬಾರದ ಎಂದು ಪ್ರಶ್ನಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಐಟಿ ಸಚಿವ ಪ್ರಿಯಾಂಕ ಖರ್ಗೆ ಒಕ್ಕಲಿಗ ಸಮುದಾಯದ ಚಂದ್ರಶೇಖರ ಸ್ವಾಮಿ ವಿರುದ್ದ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ‘ ಬಿಜೆಪಿಯವರಿಗೆ ಸಂವಿಧಾನ ಕಾನೂನಿನಲ್ಲಿ ನಂಬಿಕೆ ಇಲ್ಲ, ಸ್ವಾಮೀಜಿ ನೀಡಿದ ಹೇಳಿಕೆ ಕಾನೂನು ಪ್ರಕಾರ ಇದೆಯಾ ಇಲ್ಲವಾ ? ಅನ್ನೋದು ತಿಳಿದುಕೊಳ್ಳಲಿ. ಮಿಸ್ಟರ್ ಅಶೋಕ ಪ್ರಕಾರ ಸ್ವಾಮಿಜಿಗಳು ಕಾನೂನು ಬಾಹಿರಬಾಗಿ ಹೇಳಿಕೆ ಕೊಟ್ಟರೂ ಏನು ಮಾಡಬಾರದಾ ? ನೀವು ಏನೇ ತಪ್ಪು ಮಾಡಿದ್ರೂ ಜೈಶ್ರೀರಾಮ ಅಂದ ತಕ್ಷಣ ನಿಮ್ಮತಪ್ಪು ಸರಿಯಾಗಿ ಹೋಗುತ್ತಾ ? ಎಂದು ಪ್ರಶ್ನಿಸಿದರು.
ಮುಂದುವರಿದು ಮಾತನಾಡಿದ ಪ್ರಿಯಾಂಕ ಖರ್ಗೆ ‘ ಪೇಜಾವರ ಹೇಳಿಕೆ ಬಗ್ಗೆ ಬಿಜೆಪಿ ಮೌನವಾಗಿದೆ ಅಂದ್ರೆ ಮನುಸ್ಮೃತಿಯನ್ನು ಸಮರ್ಥನೆ ಮಾಡುತ್ತಿದ್ದಾರೆ ಅಂತಾನೆ ಅರ್ಥ. ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡಿಲ್ಲ ಅಂತ ಹೇಳಿ ಕಣ್ಣಿರು ಯಡಿಯೂರಪ್ಪ ಕಣ್ಣೀರು ಸುರಿಸಿ ಓಟ್ ಕೇಳಿದ್ದು ಬಸವಣ್ಣನವರ ಹೆಸರಲ್ಲಿಯೇ ಅಲ್ವಾ ? ಸಮಾಜಕ್ಕೆ ದಾರಿ ದೀಪ ಆಗಬೇಕಾದ ಸ್ವಾಮಿಗಳು ಬೆಂಕಿ ಹಚ್ಚಿಕೊಂಡು ಹೋಗ್ತಾಯಿದ್ರೆ ಸುಮ್ಮನಿರಬೇಕಾ ? ಇಂಥದ್ದಕ್ಕೂ ಸಮರ್ಥನೆ ಮಾಡಿಕೊಳ್ಳವ ಬಿಜೆಪಿಯವರಿಗೆ ನಾಚಿಕೆ ಬರ್ತಿಲ್ಲವಾ ?
ಅಶೋಕ ಅವರೇ ಇಂತವರ ಪರ ನೀವು ಒಬ್ಬರು ಬೀದಿಗಿಳಿದ್ರೆ, ಲಕ್ಷಾಂತರ ಜನ ಸಂವಿಧಾನ ರಕ್ಷಣೆಗೆ ಬೀದಿಗಿಳಿತಾರೆ’ ಎಂದು ವಾಗ್ದಾಳಿ ನಡೆಸಿದರು.