Sunday, December 15, 2024

ವೈಯಕ್ತಿಕ ದ್ವೇಷ : ಹಾಡಹಗಲೇ ರೌಡಿಶೀಟರ್​ ಮರ್ಡರ್​

ಶಿವಮೊಗ್ಗ: ಹಾಡಹಗಲೇ ರೌಡಿಶೀಟರ್ ಓರ್ವನನ್ನು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕಪಡಾ ರಾಜೇಶ್ ಶೆಟ್ಟಿ (38) ಕೊಲೆಗೀಡಾದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಶಿವಮೊಗ್ಗ ನಗರದ ಹಳೇ ಬೊಮ್ಮನಕಟ್ಟೆ‌ ಮುಖ್ಯರಸ್ತೆಯ ಮಾರಮ್ಮನ ಗುಡಿ ಸಮೀಪದ ಗ್ಯಾರೇಜ್ ಬಳಿ ಮಧ್ಯಾಹ್ನ ಈ ಘಟನೆ ನಡೆದಿದೆ. ದುಷ್ಕರ್ಮಿಗಳ ದಾಳಿಯಿಂದ ರಾಜೇಶ್ ಶೆಟ್ಟಿಯು ಸ್ಥಳದಲ್ಲೇ ಅಸುನೀಗಿದ್ದು, ಈತನ ಮೇಲೆ ಮುಸುಕುಧಾರಿಗಳು ಬಂದು ಅಟ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ.

ರೌಡಿ ಶೀಟರ್ ರಾಜೇಶ್ ಶೆಟ್ಟಿ, ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದು, ಈತನ ವಿರುದ್ದ ಆರೇಳು ಪ್ರಕರಣಗಳಿವೆ. ಸದ್ಯ ಆಟೋ ಚಾಲನೆ, ರಿಯಲ್ ಎಸ್ಟೇಟ್, ಬ್ರೋಕರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈತನ ವಿರುದ್ಧ ಹಲವು ಕೇಸುಗಳಿವೆ.

ಇನ್ನು ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಎದುರಾಳಿ ತಂಡವೊಂದು ಕೊಲೆ ಮಾಡಿದೆ ಎನ್ನಲಾಗಿದ್ದು, ಹತ್ಯೆಗೆ ಕಾರಣವೇನು ಎಂಬುದು ತಿಳಿದುಬರಬೇಕಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಸೇರಿದಂತೆ ವಿನೋಬನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES