ಹುಬ್ಬಳ್ಳಿ : ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಪಡೆದಿದ್ದ ಕುಟುಂಬಸ್ಥರು ಅದನ್ನು ಮರುಪಾವತಿ ಮಾಡಿಲ್ಲ ಎಂದು ಆರೋಪಿಸಿ ಫೈನಾನ್ಸ್ ಅಧಿಕಾರಿಗಳು ಇಡೀ ಕುಟುಂಬವನ್ನೆ ಮನೆಯಿಂದ ಹೊರಗೆ ಹಾಕಿದ್ದಾರೆ. ಗರ್ಭಿಣಿ ಮಹಿಳೆಯಿದ್ದರು ಸಹ ಫೈನಾನ್ಸ್ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿದ್ದು. ಊಟ, ಮಾತ್ರೆ ನೀಡದೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಮಕ್ತುಂಸಾಬ್ ಎನ್ನುವವರು ಎಕ್ವಾಟಿಸ್ ಸ್ಮಾಲ್ ಫೈನಾನ್ಸ್ ನಿಂದ 40 ಸಾವಿರ ಸಾಲ ಪಡೆದಿದ್ದರು. ಆದರೆ ಅದನ್ನು ಸರಿಯಾದ ಸಮಯಕ್ಕೆ ಹಿಂದಿರುಗಿಸದ ಕಾರಣ ಬಡ್ಡಿಯೆಲ್ಲಾ ಸೇರಿ ಒಟ್ಟು 1.50 ಲಕ್ಷ ಹಣವನ್ನು ಹಿಂತಿರುಗಿಸಬೇಕು ಎಂದು ಫೈನಾನ್ಸ್ ಸಿಬ್ಬಂದಿಗಳು ಹೇಳುತ್ತಿದ್ದಾರೆ.
ಇದೇ ಸಾಲವನ್ನು ನೆನ್ನೆ ವಸೂಲು ಮಾಡಲು ಫೈನಾನ್ಸ್ ಸಿಬ್ಬಂದಿಗಳು ಬಂದಿದ್ದು. ಮನೆಯಲ್ಲಿದ್ದವರನೆಲ್ಲಾ ಮನೆಯಿಂದ ಹೊರಹಾಕಿದ್ದಾರೆ. ಗರ್ಭಿಣಿ ರೇಷ್ಮಾ ಜಮಾದಾರ ಎಂಬುವವರನ್ನು ಮನೆಯಿಂದ ಹೊರಹಾಕಿದ್ದು. ಮಾತ್ರೆಯನ್ನು ನೀಡದೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ಇಡೀ ಕುಟುಂಬವನ್ನು ಮನೆಯಿಂದ ಹೊರಹಾಕಿ ಮನೆಯನ್ನು ಸೀಜ್ ಮಾಡಿದ್ದು. ಗರ್ಭಿಣಿ ಮಹಿಳೆಗೆ ಊಟ, ಮಾತ್ರೆ ನೀಡದೆ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಊಟವಿಲ್ಲದೆ ಗರ್ಭಿಣಿ ಮಹಿಳೆ ರೇಷ್ಮಾ ಕುಸಿದು ಬಿದ್ದಿದ್ದು. ಮಹಿಳೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.