Sunday, December 15, 2024

ಜನರಿಂದ ತಿರಸ್ಕೃತಗೊಂಡು ತಿಪ್ಪೆ ಸೇರಿರೋರ ಬಗ್ಗೆ ನನ್ನ ಬಳಿ ಕೇಳಬೇಡಿ : ಪ್ರತಾಪ್​ ಸಿಂಹ

ಬಾಗಲಕೋಟೆ: ಬಸನಗೌಡ ಪಾಟೀಕ್​ ಯತ್ನಾಳ್​ ಬಗ್ಗೆ ಇಂದು ಮಾಜಿ ಸಚಿವ ರೇಣುಕಾಚಾರ್ಯ ಕಿಡಿಕಾರಿದ್ದು.  ಸ್ವಲ್ಪ ಖಾರವಾಗಿಯೇ ಮಾತನಾಡಿದ್ದಾರೆ. ಇದರ ಕುರಿತು ಬಾಗಲಕೋಟೆಯಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್​ ಸಿಂಹ ಇಂತವರ ಬಗ್ಗೆ ನಾನು ಮಾತನಾಡಲು ಇಷ್ಟ ಪಡೋದಿಲ್ಲ. ಇವರೆಲ್ಲ ಜನರಿಂದ ತಿರಸ್ಕೃತಗೊಂಡು ತಿಪ್ಪೆ ಸೇರಿರುವವರು ಎಂದು ಹೇಳಿದರು.

ಬಾಗಲಕೋಟೆಯ ಬನಹಟ್ಟಿಯಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್​ ಸಿಂಹ ‘ಅಪ್ರಸ್ತುತ ವ್ಯಕ್ತಿಗಳ ವ್ಯರ್ತ ಆಲಾಪಗಳಿಗೆ ನಾವು ಪ್ರತಿಕ್ರಿಯೆ ನೀಡಲ್ಲ.ನಾನು ಇಂತವರಿಗೆಲ್ಲ ಉತ್ತರ ಕೊಡುದು ಇಲ್ಲ, ಹಿಂದೆ ಇವರು ಕಾಂಗ್ರೆಸ್​ ಸರ್ಕಾರ ಬಂದಾಗು ಸಿಎಂ, ಡಿಸಿಎಂ ಹಿಂದೆ ಹೂಗುಚ್ಚ ಹಿಡಿದುಕೊಂಡು ಓಡಿ ಹೋದವರು, ಡಿ.ಕೆ ಶಿವಕುಮಾರ್ ಮನೆ ಬಾಗಿಲಿಗೆ ಹೋಗಿ ಕಾಲು ಇಡಿದುಕೊಂಡವರು.

ಇಂತಹ ವ್ಯಕ್ತಿಯಿಂದ ನಾವು ಪಕ್ಷ ನಿಷ್ಟೆ, ಪಕ್ಷ ಸಿದ್ದಾಂತವನ್ನು ಕಲಿಯುವ ಅವಶ್ಯಕತೆಯಿಲ್ಲ. ಇವರು ಜನರಿಂದ ತಿರಸ್ಕೃತಗೊಂಡು ತಿಪ್ಪೆ ಸೇರಿರುವ ಜನ, ಇವರ ಬಗ್ಗೆ ನನ್ನ ಬಳಿ ದಯವಿಟ್ಟು ಕೇಳಬೇಡಿ ಎಂದು ಪ್ರತಾಪ್​ ಸಿಂಹ ಹೇಳಿದರು

 

RELATED ARTICLES

Related Articles

TRENDING ARTICLES