Thursday, December 5, 2024

ಯತ್ನಾಳ್​ ಹಿಂದೂ ಹುಲಿಯಲ್ಲ, ಹಿಂದೂ ಇಲಿ : ರೇಣುಕಾಚಾರ್ಯ

ಕೋಲಾರ : ಬಿಜೆಪಿ ಒಳಜಗಳ ದಿನದಿಂದ ದಿನಕ್ಕೆ ತಾರಕಕ್ಕೇರುತಿದ್ದು. ಮಾಜಿ ಸಚಿವ ರೇಣುಕಚಾರ್ಯ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್​ರನ್ನು ಹಿಂದು ಹುಲಿಯಲ್ಲ , ಅವರು ಹಿಂದು ಇಲಿ ಎಂದು ಹೇಳಿದ್ದಾರೆ.

ಕೋಲಾರದ ಕುರುಡುಮಲೆ ದೇಗುಲದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ ನೀಡಿದ್ದು. ಯತ್ನಾಳ್​ ಪಕ್ಷ ವಿರೋಧಿ ಕೆಲಸವನ್ನು ಮಾಡುತ್ತಿದ್ದಾರೆ. ಆವರು ಹಿಂದೂ ಹುಲಿಯಲ್ಲ, ಅವರು ಹಿಂದೂ ಇಲಿ, ಬಿಜೆಪಿಗೆ ಹೊರಗಿನ ದುಷ್ಟಶಕ್ತಿಗಳೆಂದರೆ ಅದು ಕಾಂಗ್ರೆಸ್​, ಹಾಗೂ ಒಳಗಿನ ದುಷ್ಟಶಕ್ತಿಗಳೆಂದರೆ ಪಕ್ಷ ವಿರೋಧಿಗಳು. ಯತ್ನಾಳ್​ ಅವರು ಕಾಂಗ್ರೆಸ್​ ಮುಖವಾಣಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಸೋನಿಯಾ ಗಾಂಧಿ, ರಾಹುಲ್​ ಗಾಂಧಿಯಿಂದ ಸುಪಾರಿ ಪಡೆದುಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಯತ್ನಾಳ್​ ಮೇಲೆ ಕಿಡಿಕಾರಿದರು.

ಮುಂದುವರಿದು ಮಾತನಾಡಿದ ರೇಣುಕಾಚಾರ್ಯ ‘ನನ್ನ ಬಗ್ಗೆ ಹಗುರವಾಗಿ ಮಾತನಾಡ ಬೇಡ ಎಂದು ಏಕವಚನದಲ್ಲೆ ಯತ್ನಾಳ್​ ಮೇಲೆ ವಾಗ್ದಾಳಿ ನಡೆಸಿದರು. ಯತ್ನಾಳ್​ ಒಬ್ಬ ಗೋಮುಖ ವ್ಯಾಘ್ರ, ನೀನು ಹಿಂದೂ ಮುಖವಾಡ ಹಾಕಿಕೊಂಡಿದ್ದೀಯ, ನೀನೆ ಪಕ್ಷದಿಂದ ಇಫ್ತೀಯರ್​ ಕೂಟ  ಮಾಡಿದ್ದೆ, ಪಕ್ಷದಲ್ಲಿ ಸ್ವಯಂ ಘೊಷಿತ ಹಿಂದು  ಹುಲಿ ಎಂದು ಹೇಳ್ತೀಯ, ನಿನಗೆ ಮಾನ ಮರ್ಯಾದೆ ಇದೆಯ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES