Thursday, December 5, 2024

ಸಿದ್ದರಾಮಯ್ಯ ದಕ್ಷಿಣ ಭಾರತದ ಪ್ರಬಲ ನಾಯಕ : ಹೆಚ್​. ಆಂಜನೇಯ

ಬೆಂಗಳೂರು : ಸಿಎಂ ಸಿದ್ಧರಾಮಯ್ಯರನ್ನು ಬೆಂಬಲಿಸಿ ಹಾಸನದಲ್ಲಿ ನಿಗದಿಯಾಗಿರುವ ಸ್ವಾಭಿಮಾನಿ ಸಮಾವೇಶದ ಕುರಿತು ಮಾತನಾಡಿದ ಮಾಜಿ ಸಚಿವ ಹೆಚ್​. ಆಂಜನೇಯ ಸಿದ್ದರಾಮಯ್ಯನ ಪರವಾಗಿ ಬ್ಯಾಟ್​ ಬೀಸಿದ್ದು. ಸಿಎಂ ಸಿದ್ದರಾಮಯ್ಯ ದಕ್ಷಿಣ ಭಾರತದ ಅತ್ಯಂತ ಪ್ರಬಲ ನಾಯಕ ಎಂದು ಹೇಳಿದರು.

ಸ್ವಾಭಿಮಾನಿ ಸಮಾವೇಶದ ಪರವಾಗಿ ಬ್ಯಾಟಿಂಗ್ ಮಾಡಿದ ಮಾಜಿ ಸಚಿವ ಹೆಚ್ ಆಂಜನೇಯ ‘ ಸಮಾವೇಶ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ. ಇದರಿಂದ ಪಕ್ಷದ ಸಂಘಟನೆಯ ಕೆಲಸ ಕೂಡ ಆಗಲಿದೆ. ಅಷ್ಟೆ ಅಲ್ಲದೆ ಸಿದ್ದರಾಮಯ್ಯನ ಅಭಿಮಾನಿಗಳು ಎಲ್ಲಾ ಜಿಲ್ಲೆಯಲ್ಲಿ ಇದ್ದಾರೆ, ಸಿದ್ದರಾಮಯ್ಯನವರು ಕಾಂಗ್ರೆಸ್​ಗೆ ಶಕ್ತಿಯಾಗಿದ್ದಾರೆ. ಅವರು ದಕ್ಷಿಣ ಭಾರತದಲ್ಲೇ ಪ್ರಬಲ’ ನಾಯಕರಾಗಿದ್ದಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಹೆಚ್​. ಆಂಜನೇಯ ‘ ಅಹಿಂದ ಸಮಾವೇಶವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಷ ಸಂಘಟನೆಗಾಗಿ ಆಗಿಂದಾಗ್ಗೆ ಸಮಾವೇಶಗಳು ನಡೆಯುತ್ತಿರುತ್ತವೆ. ಅದಕ್ಕೆ ನಾವು ಸಮಾವೇಶ ನಡೆಸುತ್ತಿವೆ. ಈ ಸಮಾವೇಶಕ್ಕೆ  ಎಐಸಿಸಿ ಅಧ್ಯಕ್ಷರನ್ನು ಕರೆಸುತ್ತೇವೆ. ಅವರು ಕೂಡ ಕೆಳ ಸಮುದಾಯದಿಂದ ಬಂದು ಉನ್ನತ ಸ್ಥಾನದಲ್ಲಿದ್ದಾರೆ.

ಕೇವಲ ಇಲ್ಲಿಗೆ ನಿಲ್ಲದೆ ಮುಂದಿನ ದಿನಗಳಲ್ಲಿ ಚಿತ್ರದುರ್ಗ ಸೇರಿದಂತೆ ಹಲವೆಡೆ ಸಮಾವೇಶ ಮಾಡುತ್ತೇವೆ.
ಮುಂದಿನ ಅವಧಿಗೂ ಪಕ್ಷವನ್ನ ಅಧಿಕಾರಕ್ಕೆ ತರಲು ಈ ಸಮಾವೇಶವನ್ನು ನಡೆಸುತ್ತೇವೆ. ಈ ವಿಚಾರಕ್ಕೆ ಯಾರು ಅಪಸ್ವರ ಎತ್ತುವ ಅಗತ್ಯ ಇಲ್ಲ, ನಾನೇನು ಬಿಜೆಪಿ, ಜೆಡಿಎಸ್​ನವರನ್ನು ಕರೆದು ಸಮಾವೇಶ ನಡೆಸುತ್ತಿಲ್ಲ ಎಂದು ಸ್ವಾಭಿಮಾನಿ ಸಮಾವೇಶಕ್ಕೆ ಅಪಸ್ವರ ಎತ್ತಿದವರ ವಿರುದ್ದ ಹೆಚ್​. ಆಂಜನೇಯ ಕಿಡಿಕಾರಿದರು.

RELATED ARTICLES

Related Articles

TRENDING ARTICLES